ಬೈಕ್‌ ಸ್ಕಿಡ್‌: ಸವಾರ ಮೃತ್ಯು

ವಿಟ್ಲ, ಜು.೧೮- ಬೈಕ್‌ ಸ್ಕಿಡ್‌ ಆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟವರನ್ನು ಅನ್ನಪೂರ್ಣ ಟ್ರಾವೆಲ್ಸ್ ಮಾಲಕ ಕಾಶಿಮಠ ಸತ್ಯನಾರಾಯಣ ಭಟ್(54) ಎಂದು ಗುರುತಿಸಲಾಗಿದೆ. ಸತ್ಯನಾರಾಯಣ ಭಟ್ ರವರು ಕನ್ಯಾನದಿಂದ ವಿಟ್ಲ ಕಡೆಗೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡ ಅವರು ವಿಟ್ಲ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಮತ್ತು ಮಗಳನ್ನು ಅಗಲಿದ್ದಾರೆ.