ಕಲಬುರಗಿ,ಸೆ.24-ಬೈಕ್ ಸ್ಕಿಡ್ಡಾಗಿ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಗರದ ಆಳಂದ ಚೆಕ್‍ಪೋಸ್ಟ್ ಹತ್ತಿರದ ವೇದಾಂತ ಆಸ್ಪತ್ರೆ ಹತ್ತಿರ ನಡೆದಿದೆ.
ಮೃತನನ್ನು ರುಕ್ಮೋದ್ದಿನ್ ಎಂದು ಗುರುತಿಸಲಾಗಿದೆ.
ಶುಕ್ರವಾರ ಸಾಯಂಕಾಲ ಕೆಲಸ ಮುಗಿಸಿಕೊಂಡು ರುಕ್ಮೋದ್ದಿನ್ ಭವಾನಿ ನಗರ ಕಾಕಡೆ ಚೌಕ್ ಮುಖಾಂತರ ಆಳಂದ ಚೆಕ್‍ಪೋಸ್ಟ್ ಕಡೆಗೆ ಬೈಕ್ ಮೇಲೆ ಹೋಗುತ್ತಿದ್ದರು. ಮಳೆ ಸುರಿಯಲಾರಂಭಿಸಿದ್ದರಿಂದ ಬೇಗನೆ ಮನೆ ಸೇರಲು ಅತಿವೇಗವಾಗಿ ಬೈಕ್ ಚಲಾಯಿಸಿಕೊಂಡು ಹೋಗುವಾಗ ಬೈಕ್ ಸ್ಕಿಡ್ಡಾಗಿ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ರುಕ್ಮೋದ್ದಿನ್ ಸಹೋದರ ಮಹ್ಮದ್ ಅತ್ತಾರ್ ಅವರು ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ದೂರು ಸಲ್ಲಿಸಿದ್ದಾರೆ.