ಬೈಕ್ ಸವಾರ ಸಾವು

ಅಫಜಲಪುರ:ಸೆ.3: ತಾಲೂಕಿನ ಮಾಶಾಳ ಗ್ರಾಮದ ಬೋರುಟಿ ಗಡಿಭಾಗದಲ್ಲಿ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ಶನಿವಾರ ಸಂಜೆ 7 ರ ಸುಮಾರಿಗೆ ಸಂಭವಿಸಿದೆ.

ಮೃತ ದುರ್ದೈವಿಯನ್ನು ಗಣಪತಿ ತಂದೆ ಗುರುನಾಥ ಕಾಳೆ (28) ಎಂದು ಗುರುತಿಸಲಾಗಿದ್ದು ಜೇವರ್ಗಿ ತಾಲೂಕಿನ ಇಟಗಿ ಗ್ರಾಮದವನು ಎಂದು ತಿಳಿದುಬಂದಿದೆ.

ಇಟಗಿ ಗ್ರಾಮದಿಂದ ಕಲ್ಲತವಾಡಿ ಗ್ರಾಮಕ್ಕೆ ಸಂಬಂಧಿಕರ ಮನೆಗೆ ತೆರಳುವ ಸಂದರ್ಭದಲ್ಲಿ ಘಟನೆ ಸಂಭವಿಸಿದ್ದು ಸ್ಥಳಕ್ಕೆ ಪೆÇಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಫಜಲಪುರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.