ಬೈಕ್ ಸವಾರರಿಗೆ ಹೆಲ್ಮೇಟ್ ಉಚಿತ ವಿತರಣೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಹವಾ ಮಲ್ಲಿನಾಥ ಮಹಾರಾಜರ ಜನ್ಮದಿನ ಅರ್ಥಪೂರ್ಣ ಆಚರಣೆ

????????????????????????????????????

ಬೀದರ್:ಆ.28:ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರ ಜನ್ಮದಿನವನ್ನು ಇಲ್ಲಿಯ ಐ.ಎಂ.ಎ. ಹಾಲ್ ಸಮೀಪದ ಓಂ ನಮಃ ಶಿವಾಯ ಸ್ವಾಮೀಜಿ ಆಶ್ರಮದಲ್ಲಿ ವಿವಿಧ ಸಾಮಾಜಿಕ ಚಟುವಟಿಕೆಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
56ನೇ ಜನ್ಮದಿನದ ಅಂಗವಾಗಿ ಇಂಗ್ಲಿಷನಲ್ಲಿ ಎಂ.ಎಂ.ಎನ್. (ಮಲ್ಲಿನಾಥ ಮುತ್ತ್ಯಾ ನಿರಗುಡಿ) ಎಂದು ಬರೆಯಲಾಗಿದ್ದ 56 ಕೆ.ಜಿ. ತೂಕದ ಬೃಹತ್ ಕೇಕ್ ಕತ್ತರಿಸಲಾಯಿತು.
121 ಬೈಕ್ ಸವಾರರಿಗೆ ಹೆಲ್ಮೇಟ್ ಉಚಿತ ವಿತರಿಸಿ, ರಸ್ತೆ ಸುರಕ್ಷತಾ ನಿಯಮಗಳ ಅರಿವು ಮೂಡಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಸತ್ಕರಿಸಿ ಪೆÇ್ರತ್ಸಾಹಿಸಲಾಯಿತು. ಬೀದರ್ ಸೇರಿ ರಾಜ್ಯದ ವಿವಿಧ ಜಿಲ್ಲೆ, ನೆರೆಯ ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಸಾನಿಧ್ಯ ವಹಿಸಿದ್ದ ಮಳಚಾಪುರದ ಸದ್ರೂಪಾನಂದ ಸ್ವಾಮೀಜಿ ಮಾತನಾಡಿ, ಹವಾ ಮಲ್ಲಿನಾಥ ಮಹಾರಾಜರು ಅಪರೂಪದ ಸಂತರಾಗಿದ್ದಾರೆ ಎಂದು ಬಣ್ಣಿಸಿದರು.
ತಮ್ಮ ಮಠಗಳಲ್ಲಿ ನಿತ್ಯ ದಾಸೋಹ ನಡೆಸಿಕೊಂಡು ಬರುತ್ತಿದ್ದಾರೆ. ಭಾರತೀಯರಲ್ಲಿ ದೇಶಭಕ್ತಿ, ದೇಶಾಭಿಮಾನ ಜಾಗೃತಗೊಳಿಸುತ್ತಿದ್ದಾರೆ. ಭಕ್ತರಿಗೆ ನೈತಿಕತೆ, ಜೀವನ ಮೌಲ್ಯಗಳನ್ನು ಹೇಳಿಕೊಡುತ್ತಿದ್ದಾರೆ. ತಮ್ಮ ಇಡೀ ಬದುಕನ್ನು ಮಾನವ ಕಲ್ಯಾಣಕ್ಕೆ ಸಮರ್ಪಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಹವಾ ಮಲ್ಲಿನಾಥ ಮಹಾರಾಜರು ಭಕ್ತರ ಸಂಕಷ್ಟ ದೂರ ಮಾಡಲು ನಿರಂತರ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ದೇಶದಾದ್ಯಂತ ಮಠಗಳನ್ನು ನಡೆಸುತ್ತಿದ್ದಾರೆ. ನಿರಂತರ ಸಮಾಜೋಧಾರ್ಮಿಕ ಕಾರ್ಯಗಳಲ್ಲಿ ನಿರತರಾಗಿದ್ದಾರೆ ಎಂದರು.
ಹೆಚ್ಚುವರಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್ ಮಾತನಾಡಿ, ಹೆಲ್ಮೇಟ್ ಧರಿಸುವುದರಿಂದ ಜೀವಗಳು ಉಳಿಯುತ್ತವೆ. ಹೆಲ್ಮೇಟ್ ಉಚಿತ ವಿತರಿಸಿದ ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯ ಕಾರ್ಯ ಶ್ಲಾಘನೀಯ. ಸಂಘ ಸಂಸ್ಥೆಗಳು ಸಾಮಾಜಿಕ ಕಾರ್ಯಕ್ಕೆ ಮುಂದಾಗಬೇಕು ಎಂದು ಸಲಹೆ ಮಾಡಿದರು.
ಕಾರ್ಯಕ್ರಮದ ರೂವಾರಿ, ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯ ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ ಮಾತನಾಡಿ, ಹವಾ ಮಲ್ಲಿನಾಥ ಮಹಾರಾಜರು ಸಮಾಜ ಹಾಗೂ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಸತ್ಕಾರ್ಯಗಳು ಇತರರಿಗೆ ಪ್ರೇರಣೆ ಆಗಲಿ ಎನ್ನುವ ಉದ್ದೇಶದಿಂದ ಪ್ರತಿ ವರ್ಷ ಅವರ ಜನ್ಮದಿನ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಮದರ್ ತೆರೆಸಾ ಅವರ ಜನ್ಮದಿನವನ್ನೂ ಆಚರಿಸಲಾಯಿತು. ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಾಬುವಾಲಿ, ಜಿ.ಕೆ. ಫೌಂಡೇಷನ್ ಅಧ್ಯಕ್ಷ ಗುರುನಾಥ ಕೊಳ್ಳೂರ, ಸಂಚಾರ ಸಿಪಿಐ ಕಪಿಲದೇವ್, ಪ್ರಮುಖರಾದ ಕಾಶೀನಾಥ ಬೆಲ್ದಾಳೆ, ಮಾರುತಿ ಬೌದ್ಧೆ, ಕುಶಾಲ್ ಯಾಬಾ, ವೀರಶೆಟ್ಟಿ ಖ್ಯಾಮಾ, ಗುರುಸಿದ್ದಪ್ಪ, ಶಶಿ ಹೊಸಳ್ಳಿ ಮುಖ್ಯ ಅತಿಥಿಯಾಗಿದ್ದರು.
ಪ್ರಮುಖರಾದ ಮಾಣಿಕ್ ಯರನಳ್ಳಿ, ನಂದೇಶ ಪಾಟೀಲ, ಆನಂದ ರಾಂಪುರೆ, ಶಿವಕುಮಾರ ಮದನೂರ, ನಾಗೇಶ ಬೆಮಳಖೇಡ, ವಿಶ್ವ ಕೊಳಾರ, ದಿಲೀಪ್ ಪಾಟೀಲ, ಅಜಯ ಕುದರೆ, ವಿಶಾಲ್ ಬಂಟಿ, ಸುನೀಲ್, ಮಲ್ಲು ಕೊಳಾರ, ಸುಧಾಕರ, ವೀರಶೆಟ್ಟಿ, ಅನಿಲ್ ಅಲ್ಮಾ, ನಾಗೇಶ ಪಾಟೀಲ, ಸಂಗಮೇಶ ಮದನೂರ, ರಿಷಿ ಕೊಳಾರ, ಸಿದ್ದು ಮಮದಾಪುರೆ, ಪ್ರವೀಣ್, ರಾಜು ಮೆಕ್ಯಾನಿಕ್, ರೇವಣಸಿದ್ದಪ್ಪ ಪಾಟೀಲ, ಸಾಯಿನಾಥ ದಾನಾ, ಈಶ್ವರ, ನಿತಿಶ್ ಪಾಟೀಲ, ಅರುಣ್, ಇಸ್ಮಾಯಿಲ್, ರಾಜಕುಮಾರ, ವೀರಶೆಟ್ಟಿ ಕೊಳಾರ ಮತ್ತಿತರರು ಇದ್ದರು. ದೀಪಕ್ ಥಮಕೆ ನಿರೂಪಿಸಿದರು.