ಬೈಕ್ ಸವಾರನಿಗೆ 6 ತಿಂಗಳು ಜೈಲು; ದಂಡ

ಕಲಬುರಗಿ,ಜೂ4:ರಸ್ತೆ ಬದಿಯಲ್ಲಿ ನಿಂತಿದ್ದ ಬಾಲಕಿಗೆ ಬೈಕ್ ಡಿಕ್ಕಿ ಹೊಡೆದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೈಕ್ ಸವಾರ ಅಣ್ಣಾರಾಯ ಮ್ಯಾಗೇರಿ ಎಂಬುವವರಿಗೆ ಇಲ್ಲಿನ 5 ನೇ ಹೆಚ್ಚುವರಿ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದ ನ್ಯಾಯಾಧೀಶ ದಸ್ತಗೀರಸಾಬ ಅಬ್ದುಲ್‍ರಜಾಕ್ ಮುಲ್ಲಾ ಅವರು 6 ತಿಂಗಳು ಜೈಲು ಮತ್ತು 10 ಸಾವಿರ ರೂ ದಂಡ ವಿಧಿಸಿ ಆಧೇಶಿಸಿದ್ದಾರೆ
2013 ರ ನವೆಂಬರ್ 22 ರಂದು ಮಿಸ್ಬಾ ನಗರದ ರಿಂಗ್ ರಸ್ತೆಯ ಬಳಿ ಬಸ್ ಗಾಗಿ ಕಾಯುತ್ತ ನಿಂತಿದ್ದ ಸುಮಯ್ಯ ಪರವೀನ್ ( 10) ಎಂ¨ ಬಾಲಕಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಆಕೆ ಮೃತಪಟ್ಟಿದ್ದಳು.ಗ್ರಾಮೀ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ಜಯಶ್ರೀ ಪರುತಯ್ಯ ಅವರು ವಾದ ಮಂಡಿಸಿದ್ದರು.