ಬೈಕ್ ರ್ಯಾಲಿ ಮೂಲಕ ವಿಜಯೆಂದ್ರಗೆ ಭವ್ಯ ಸ್ವಾಗತ

ಬೀದರ್:ಜ.30: ನಗರದ ಮನ್ನಳ್ಳಿ ರಸ್ತೆಯ ಮಹಾತ್ಮ ಬೊಮ್ಮಗೊಂಡೇಶ್ವರ ವೃತ್ತದಿಂದ ಬೃಹತ್ ಬೈಕ್ ರ್ಯಾಲಿಯೊಂದಿಗೆ ಬಿವೈ ವಿಜಯೇಂದ್ರ ಅವರನ್ನು ಪ್ರಮುಖ ಮಾರ್ಗಗಳ ಮೂಲಕ ನಗರದ ಗಣೇಶ ಮೈದಾನದವರೆಗೆ ಮೆರವಣಿಗೆಯೊಂದಿಗೆ ಕರೆತರಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ ಶೈಲೇಂದ್ರ ಬೆಲ್ದಾಳೆ, ಔರಾದ್ ಶಾಸಕರಾದ ಪ್ರಭು ಚವ್ಹಾಣ, ಶಾಸಕರಾದ ಶರಣು ಸಲಗಾರ, ಸಿದ್ದು ಪಾಟೀಲ, ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪುರೆ, ಸುನೀಲ ವಲ್ಯಾಪುರೆ, ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಸುಭಾಸ ಕಲ್ಲೂರ, ಮಾಲಿಕಯ್ಯ ಗುತ್ತೆದಾರ ಸೇರಿದಂತೆ ಅನೇಕ ಮುಖಂಡರು ಇದ್ದರು.