ಬೈಕ್ ರ್‍ಯಾಲಿ ಗಾಯಗೊಂಡಿದ್ದ ಯುವಕನ ಚಿಕಿತ್ಸೆಗೆ ಶಾಸಕರಿಂದ ಧನಸಹಾಯ

ದೇವದುರ್ಗ.ಸೆ.೧೪- ಪಟ್ಟಣದಲ್ಲಿ ಕಳೆದ ಎರಡು ತಿಂಗಳ ಹಿಂದೆ ನಡೆದ ಬೈಕ್ ರ್‍ಯಾಲಿ ವೇಳೆ ಗಾಯಗೊಂಡು ಶ್ರವಣ ಸಮಸ್ಯೆಯಿಂದ ಬಳಲುತ್ತಿದ್ದ ಕರೇಗುಡ್ಡ ಗ್ರಾಮದ ಯುವಕ ಹಾಗೂ ಬಿಜೆಪಿ ಕಾರ್ಯಕರ್ತ ಸೋಮರೆಡ್ಡಿ ಅವರ ಆಸ್ಪತ್ರೆಯ ಚಿಕಿತ್ಸೆಯ ಬಳಿಕ ಯುವಕನ ಪೂರ್ಣ ಪ್ರಮಾಣದ ನಿರಂತರ ಚಿಕಿತ್ಸೆ ನೀಡವುದರ ಜೊತೆಗೆ ಶ್ರವಣ ಸಾಧನ ಖರೀದಿಗಾಗಿ ಶಾಸಕ ಕೆ.ಶಿವನಗೌಡ ನಾಯಕ ಅವರು ವೈಯಕ್ತಿಕವಾಗಿ ೩೩ ಸಾವಿರ ಧನ ಸಹಾಯವನ್ನು ಶಾಸಕರ ಸೂಚನೆ ಮೇರೆಗೆ ಶಾಸಕರ ಆಪ್ತ ಕಾರ್ಯದರ್ಶಿ ಮಂಜುನಾಥ ವಿತರಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಣ ವಿತರಿಸಿ ಮಾತಾನಾಡಿದ ಅವರು ಪ್ರಧಾನಮಂತ್ರಿಗಳ ೮ ವರ್ಷಗಳ ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣ ಪರ್ವದ ಕಾರ್ಯಕ್ರಮ ಯಶಸ್ವಿಗೊಳಿಸಿದ ನಿಟ್ಟಿನಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಹಮ್ಮಿಕೊಂಡಿದ್ದ ಬೈಕ್ ರ್‍ಯಾಲಿ ವೇಳೆ ಗಾಯಗೊಂಡಿದ್ದ ಪಕ್ಷದ ಕಾರ್ಯಕರ್ತನಿಗೆ ಪೂರ್ಣ ಪ್ರಮಾಣದ ಚಿಕಿತ್ಸೆಯನ್ನು ಕೊಡಿಸುವುದರ ಮೂಲಕ ಕ್ಷೇತ್ರದ ಶಾಸಕರು ಸ್ವಾರ್ಥಕತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ನಾಗರಾಜ್ ಪಾಟೀಲ್ ಗೋಪಳಾಪುರ, ತಾಲೂಕ ಪಂಚಾಯತ್ ಮಾಜಿ ಸದಸ್ಯ ಮಾನಯ್ಯ ಸೇರಿದಂತೆ ಅನೇಕರಿದ್ದರು.