ಬೈಕ್ ಮೇಲೆ ನಿಂತು ಸವಾರಿ…..


ಇಲಕಲ್,ಆ.16:ಬಾಗಲಕೋಟೆ ಜಿಲ್ಲೆಯ ಇಲಕಲ್ಲ ನಿವಾಸಿ ವೀರೇಶ ಕುಂದರಗಿಮಠ ಸ್ವಾತಂತ್ರ್ಯ ದಿನಾಚರಣೆಯಂದು ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ತಿರಂಗಾ ಹಿಡಿದು ಬೈಕ್ ಮೇಲೆ ನಿಂತು ಸವಾರಿ ಮಾಡಿ ಗಮನ ಸೆಳೆದರು.
ಬೈಕ್ ಸಾಹಸ ಕ್ರೀಡಾಪಟುವಾದ ಅವರು ಈ ಹಿಂದೆ ಬಾಗಲಕೋಟ ಜಿಲ್ಲಾ ಭವನ ದಿಂದ ಬೆಂಗಳೂರು ವಿಧಾನ ಸೌಧದ ವರಿಗೆ 500 ಕಿಮೀ ಹ್ಯಾಂಡಲ್ ಇಲ್ಲದ ಬೈಕ್ ನ್ನು ಓಡಿಸಿ ವಿಶೇಷ ಬೈಕ್ ಸಾಹಸ ಕ್ರೀಡೆಯ ಮೂಲಕ ದಾಖಲೆ ಮಾಡಿದ್ದರು.
ಇದೀಗ ಸ್ವಾತಂತ್ರೋತ್ಸವದ ದಿನಾಚರಣೆಯ ಅಂಗವಾಗಿ ಇಲಕಲ್ ಬಸವೇಶ್ವರ ಸರ್ಕಲ್ ನ ಹತ್ತಿರ ಓಊ50 ಹುನಗುಂದ ಇಲಕಲ್ ರೋಡಲ್ಲಿ ಹ್ಯಾಂಡಲ್ ಇರುವ ಬೈಕನ್ನೇರಿ ಕೈಯಲ್ಲಿ ರಾಷ್ಟ್ರ ಧ್ವಜ ಹಾಗೂ ಬೈಕ್ ಗೆ ಕನ್ನಡ ಧ್ವಜವನ್ನು ಕಟ್ಟಿಕೊಂಡು ರಾಜ್ಯ, ರಾಷ್ಟ್ರ ಪ್ರೇಮವನ್ನು ಮೆರೆದಿದ್ದಾರೆ.