ಬೈಕ್ ಪಾರ್ಕಿಂಗ್ ವಿಚಾರಕ್ಕೆ ಹೊಡೆದಾಟ: 7 ಜನರ ವಿರುದ್ಧ ಪ್ರಕರಣ ದಾಖಲು

ಕಲಬುರಗಿ,ಆ.9-ಬೈಕ್ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ರಸ್ತೆಯ ಮೇಲೆ ಹೊಡೆದಾಟ ನಡೆಸಿ ಸಾರ್ವಜನಿಕ ಶಾಂತಿಗೆ ಭಂಗ ತಂದ ಆರೋಪದ ಮೇಲೆ 7 ಜನರ ವಿರುದ್ಧ ಇಲ್ಲಿನ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಅಂಬೇಡ್ಕರ್ ಆಶ್ರಯ ಕಾಲೋನಿಯ ರೇವಣಸಿದ್ದ ಬಂಗಾರಿ, ಪರಶುರಾಮ ದೇವಕರ, ಮಹೇಶ ಮೂಲಭಾರತ, ಶರಣಮ್ಮ ಬಂಗಾರಿ ಕುಟುಂಬದರು ಮತ್ತು ಪಕ್ಕದ ಮನೆಯ ಶ್ರವಣ್ ದೊಡ್ಡಮನಿ, ಗಣೇಶ ದೊಡ್ಡಮನಿ, ಶಾಂತಾಬಾಯಿ ದೊಡ್ಡಮನಿ ಕುಟುಂಬದವರು ಬೈಕ್ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಹೊಡೆದಾಡಿ ಸಾರ್ವಜನಿಕ ಶಾಂತಿಗೆ ಭಂಗ ತಂದಿದ್ದಾರೆ ಎಂದು ಪೇದೆ ಶಶಿಕಾಂತ ಅವರು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಈ ದೂರಿನ ಅನ್ವಯ ಮುಖ್ಯಪೇದೆ ಜಗದೀಶ ಅವರು 7 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.