ಬೈಕ್‌ ಪಲ್ಟಿ: ಸಹಸವಾರ ಮೃತ್ಯು 

ಕಾಸರಗೋಡು, ಸೆ.೧೩- ಬೈಕ್ ಮಗುಚಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಯೋರ್ವ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯ ನಾರಂಪಾಡಿಯಲ್ಲಿ ನಡೆದಿದೆ. 

ನಾರಂಪಾಡಿ ನೆಡುವಂಗಡಿಯ ನಾರಾಯಣ ರವರ ಪುತ್ರ ಮಿಥುನ್ ರಾಜ್ (16) ಮೃತಪಟ್ಟ ವಿದ್ಯಾರ್ಥಿ. ಇರಿಯಣ್ಣಿ ಸರಕಾರಿ ಹಯರ್ ಸೆಕಂಡರಿ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿಯಾಗಿದ್ದನು. ಸೆ. 8 ರಂದು ಕಾಸರಗೋಡಿನಿಂದ ನಾರಂಪಾಡಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಕೊಲ್ಲಂಗಾನ ದಲ್ಲಿ ಬೈಕ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಹಿಂಬದಿ ಸವಾರ ನಾಗಿದ್ದ ಮಿಥುನ್ ರಾಜ್ ರಸ್ತೆಗೆಸೆಲ್ಪಟ್ಟು ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ಇನ್ನು ಬೈಕ್ ಚಲಾಯಿಸುತ್ತಿದ್ದ ರಂಜಿತ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಬಗ್ಗೆ ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.