ಬೈಕ್ ನಿಯಂತ್ರಣ ತಪ್ಪಿ ಬಿದ್ದು ಸ್ಥಳದಲ್ಲೇ ಓರ್ವ ಸಾವು

ಕಲಬುರಗಿ:ಜ.19: ಚಿತ್ತಾಪುರ ತಾಲೂಕಿನ ಮರಗೋಳ ಕ್ರಾಸ್ ಹತ್ತಿರ ಬೈಕ್ ನಿಯಂತ್ರಣ ತಪ್ಪಿ ಬಿದ್ದ ಕಾರಣ ಸ್ಥಳದಲ್ಲೇ ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ.

ಆಳಂದ ತಾಲೂಕಿನ ಎನೇನಾವುದಿ ಗ್ರಾಮದ ಗಣೇಶ ಗುಂಡಪ್ಪ 27 ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದ್ದು, ಸ್ಥಳಕ್ಕೆ ಚಿತ್ತಾಪುರ ಪೆÇಲೀಸ್ ಠಾಣೆಯ ಪಿಎಸ್‍ಐ ಶ್ರೀಶೈಲ್ ಅಂಬಾಟಿ, ಸಿಬ್ಬಂದಿಗಳಾದ ಸವಿಕುಮಾರ್, ಮತಿವಂತ, ಹುಸೇನ್ ಪಾಶಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡಿಸಿದರು.

ಈ ಕುರಿತು ಚಿತ್ತಾಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ್ದು, ಪೆÇಲೀಸರು ತನಿಖೆ ನಡೆಸಿದ್ದಾರೆ.