ಬೈಕ್ ಡಿವೈಡರಗೆ ಡಿಕ್ಕಿ : ಸವಾರ ಸಾವು

ಸಿಂಧನೂರು,ಜೂ.೨೧-ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಬೈಕ್ ಡಿವೈಡರಗೆ ಡಿಕ್ಕಿಯಾಗಿ ಕೂಲಿ ಕಾರ್ಮಿಕ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ತಡ ರಾತ್ರಿ ಸಂಭವಿಸಿದೆ.
ಹಸೇನಪ್ಪ ವ.೩೮ ಸುಕಾಲ್‌ಪೇಟೆ ಮೃತ ಪಟ್ಟ ಕಾರ್ಮಿಕನಾಗಿದ್ದು ಬೈಕ್ ಹಿಂದುಗಡೆ ಕುಳಿತ್ತಿದ್ದ ಬಸವರಾಜ ಪೂಜಾರ ತೀವ್ರ ಗಾಯಗೊಂಡಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಗರದ ಸುಕಾಲಪೇಟೆ ನಿವಾಸಿಗಳಾದ ಹಸೇನಪ್ಪ ಹಾಗೂ ಬಸವರಾಜ ಪೂಜಾರ ಇಬ್ಬರು ಮನೆ ಕಟ್ಟುವ ಕೆಲಸ ಮಾಡುವ ಕೂಲಿ ಕಾರ್ಮಿಕರಾಗಿದ್ದು. ಕಲ್ಮಂಗಿ ಗ್ರಾಮದಲ್ಲಿ ಮನೆ ಕೆಲಸ ಮಾಡಿ ಬೈಕ್‌ನಲ್ಲಿ ಬರುವಾಗ ಮಲ್ಲದ ಗುಡ್ಡ ಹತ್ತಿರ ಇರುವ ಡಿವೈಡರಗೆ ರಾತ್ರಿ, ೧೧ ಗಂಟೆ ಡಿಕ್ಕಿಯಾಗಿ ಹಸೇನಪ್ಪ ಸ್ಥಳದಲ್ಲಿ ಸಾವನ್ನಪ್ಪಿದ್ದು ಬಸವರಾಜ ತೀವ್ರ ಗಾಯಗೊಂಡಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡ ಲಾಗುತ್ತಿದೆ.
ಮೃತ ಹುಸೇನಪ್ಪ ಶವವನ್ನು ಸರ್ಕಾರಿ ಆಸ್ಪತ್ರೆ ಶವಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ತರಲಾಗಿದೆ ಕುಟುಂಬಸ್ತರ ಆಕ್ರಂದನ ಆಸ್ಪತ್ರೆಯಲ್ಲಿ ಕಂಡು ಬಂದಿತು. ಬೈಕ್ ಡಿವೈಡರಗೆ ಡಿಕ್ಕಿ ಯಾಗಿದೆ. ಅಥವಾ ಬೈಕಗೆ ಬೇರೆ ಯಾವುದಾದರು ವಾಹನ ಡಿಕ್ಕಿ ಹೊಡೆದಿದೆ ಎನ್ನುವದರ ಬಗ್ಗೆ ಪೋಲೀಸರ ತನಿಖೆಯಿಂದ ತಿಳಿದು ಬರುತ್ತೇದೆ.