ಬೈಕ್ ಡಿಕ್ಕಿ – ಸವಾರ ಹಾಗೂ ಪಾದಚಾರಿಗೆ ಗಾಯ.


ಕೂಡ್ಲಿಗಿ. ಆ. 6 :- ಬೈಕ್ ಸವಾರ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಕೆಳಗೆ ಬಿದ್ದು ಗಾಯವಾದರೆ ಬೈಕ್ ಡಿಕ್ಕಿಯಿಂದ ಪಾದಚಾರಿ ಗಾಯಗೊಂಡು ಬಳ್ಳಾರಿ ವಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಕಳೆದ ರಾತ್ರಿ ತಾಲೂಕಿನ ಚಂದ್ರಶೇಖರಪುರ ಗ್ರಾಮದ ಹೊರವಲಯದಲ್ಲಿ ಜರುಗಿದೆ.
ಚಂದ್ರಶೇಖರಪುರದ ಬೈಕ್ ಸವಾರ ನಾಗರಾಜ (19) ಹಾಗೂ ಪಾದಚಾರಿ ಲಿಂಗರಾಜು (23) ಗಾಯಗೊಂಡವರಾಗಿದ್ದಾರೆ.
 ನಾಗರಾಜನು ರಾಮದುರ್ಗ ಕ್ರಾಸ್ ನಿಂದ ಚಂದ್ರಶೇಖರಪುರ ಗ್ರಾಮದಕಡೆ ಬೈಕಿನಲ್ಲಿ ಹೋಗುತ್ತಿರುವಾಗ್ಗೆ ಗ್ರಾಮದ ಹೊರವಲಯದಲ್ಲಿರುವ ವಸತಿ ನಿಲಯದ ಸಮೀಪದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಲಿಂಗರಾಜನಿಗೆ ಬೈಕ್ ಡಿಕ್ಕಿ ಹೊಡೆಸಿದ ಪರಿಣಾಮ ಬೈಕಿನಿಂದ ಬಿದ್ದು ನಾಗರಾಜನಿಗೂ ಮತ್ತು ಬೈಕ್ ಡಿಕ್ಕಿಯಾದ ಲಿಂಗರಾಜುಗೂ ಇಬ್ಬರಿಗೂ ತೀವ್ರಗಾಯವಾದ ಪರಿಣಾಮ ತಕ್ಷಣ ಕೂಡ್ಲಿಗಿ ಅಂಬ್ಯುಲೆನ್ಸ್ ನಲ್ಲಿ ಕೂಡ್ಲಿಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಗೆ ಕಳುಹಿಸಲಾಗಿದೆ ಎಂದು ತಿಳಿದಿಬಂದಿದೆ