
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ 6 :- ವಿಂಡ್ ಫ್ಯಾನ್ ಕೆಲಸಕ್ಕೆ ಹೊರಟಿದ್ದ ಬೈಕಿನ ಹಿಂಬದಿಗೆ ಚಿತ್ರದುರ್ಗ ಕಡೆ ಹೊರಟಿದ್ದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಇಬ್ಬರಿಗೆ ತೀವ್ರಗಾಯವಾಗಿರುವ ಘಟನೆ ಇಂದು ಬೆಳಿಗ್ಗೆ 9ಗಂಟೆ ಸುಮಾರಿಗೆ ತಾಲೂಕಿನ ಹೊಸಹಳ್ಳಿ ಹೊರವಲಯದ ಹೈವೇ 50ರ ರಸ್ತೆಯಲ್ಲಿ ಜರುಗಿದೆ.
ತೀವ್ರ ಗಾಯಗೊಂಡ ಬೈಕ್ ಸವಾರರು ತಮಿಳುನಾಡು ಮೂಲದವರು ಎಂದು ಹೇಳಲಾಗುತ್ತಿದ್ದು ಹೆಸರು ವಿಳಾಸ ತಿಳಿದಿಲ್ಲವಾಗಿದ್ದು ಇವರು ವಿಂಡ್ ಫ್ಯಾನ್ ಕೆಲಸ ಮಾಡುವ ಕೂಲಿ ಕಾರ್ಮಿಕರು ಎಂದು ಹೇಳಲಾಗುತ್ತಿದೆ ಬೈಕಿಗೆ ಪೆಟ್ರೋಲ್ ಹಾಕಿಸಿಕೊಂಡು ಚಿತ್ರದುರ್ಗ ರಸ್ತೆ ಕಡೆಗೆ ಹೋಗುವಾಗ ಅತಿವೇಗ ಅಜಾಗರೂಕತೆಯಿಂದ ಕಾರಿನ ಚಾಲಕ ಚಲಾಯಿಸಿಕೊಂಡು ಬಂದು ಬೈಕಿನ ಹಿಂಬದಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಅದರ ರಭಸಕ್ಕೆ ಬೈಕಿನ ಹಿಂಬದಿ ಕುಳಿತಿದ್ದ ಸವಾರ ಸಿನಿಮೀಯ ರೀತಿಯಲ್ಲಿ ಹತ್ತು ಅಡಿ ಮೇಲಕ್ಕೆ ಹಾರಿ ಕೆಳಗೆ ಬಿದ್ದಿದ್ದಾನೆ ಹಾಗೂ ಸುಮಾರು 30ಮೀ ದೂರ ಬೈಕ್ ಬಿದ್ದಿದ್ದು 15ಅಡಿ ದೂರದಲ್ಲಿ ಬೈಕ್ ಸವಾರ ಬಿದ್ದಿದ್ದಾನೆ ಅಷ್ಟರಲ್ಲಿ ಹೆದ್ದಾರಿ ಸಹಾಯಕರ ಗುಂಪು ತಕ್ಷಣ ಧಾವಿಸಿ ಅಂಬ್ಯುಲೆನ್ಸ್ ಗೆ ಕರೆಮಾಡಿ ಇಬ್ಬರು ಗಾಯಾಳುಗಳನ್ನು ಹೊಸಹಳ್ಳಿ ಆಸ್ಪತ್ರೆಗೆ ಕಳುಹಿಸಿದ್ದಾರೆ ಘಟನಾ ಸ್ಥಳಕ್ಕೆ ಹೊಸಹಳ್ಳಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆಂದು ತಿಳಿದಿದೆ.