ಬೈಕ್ ಕಳ್ಳ ಬಂಧನ ಎಸ್.ಪಿ ಶ್ಲಾಘನೀಯ ಚಂದ್ರಶೇಖರ್

ಸಿಂಧನೂರು.ಜ.೩-ಗ್ರಾಮೀಣ ಹಾಗು ನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂದಿಸಿ ೧.೭೫ ಲಕ್ಷ ಬೆಲೆ ಬಾಳುವ ೭ ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿ.ಪಿ.ಐ ಚಂದ್ರಶೇಖರ್ ಜಿ.ನಾಯಕ ತಿಳಿಸಿದರು.
ನಗರ ಠಾಣೆಯಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಹೆಚ್ಚುವರಿ ಎಸ್.ಪಿ ಶ್ರೀಹರಿ ಸೂಚನೆ ಮರೆಗೆ ಡಿ.ವೈ.ಎಸ್.ಪಿ ವಿಶ್ವನಾಥ್ ರಾವ್ ಕುಲಕರ್ಣಿಯವರ ಮಾರ್ಗದರ್ಶನದಲ್ಲಿ ಸಿ.ಪಿ.ಐ ಚಂದ್ರಶೇಖರ್ ಜಿ.ನಾಯಕ ನಗರ ಠಾಣೆ ಪಿ.ಎಸ್.ಐ ವಿಜಯಕೃಷ್ಣ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮೆಹಬೂಬಅಲಿ ೬೭೫,ಅನಿಲ್ ಕುಮಾರ್ ೪೪೭,ಸಂಗನಗೌಡ ೪೯೮,ಗೋಪಾಲ ೬೭೯,ಆದಯ್ಯ ೬೭ ವಿಶೇಷ ತಂಡ ಹಗಲು ರಾತ್ರಿ ಶ್ರಮಿಸಿ ಮೋಟಾರ್ ಸೈಕಲ್‌ಗಳನ್ನು ಕಳ್ಳತನ ಮಾಡುತ್ತಿದ್ದ, ಆರೋಪಿ ಸಂಜಯ್‌ನನ್ನು ಬಂದಿಸುವಲಿ ಯಶಸ್ವಿಯಾಗಿದೆ ಎಂದರು.
ನಗರದ ಇಂಧಿರಾ ನಗರ ಸಂಜಯ್ ತಂದೆ ಗೋಪಾಲ ವ.೧೯ ಮೇಷನ ಕೆಲಸ ಮಾಡುವ ಸಂಜಯ್ ಸುಮಾರು ತಿಂಗಳುಗಳಿಂದ ನಗರ ಹಾಗೂ ತಾಲ್ಲೂಕಿನಲ್ಲಿ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ, ೧.೧ ೨೦೨೧ರಂದು ನಗರದ ದನದ ಸಂತೆ ಹತ್ತಿರ ಮೋಟಾರ್ ಸೈಕಲನ್ನು ನಡೆಸಿ ಕೊಂಡು ಬರುವಾಗ ಅನುಮಾನಗೊಂಡ ಸಂಜಯ್ ನನ್ನ ಇಡಿದು ವಿಚಾರಣೆ ಮಾಡಿದಾಗ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾನೆ.
ಸದರಿ ತಂಡದ ಕಾರ್ಯಾಚರಣೆಗೆ ಎಸ್.ಪಿ,ಎ.ಎಸ್.ಪಿ ಯವರು ಶ್ಲಾಘನೀಯ ನೀಡಿ ಬಹುಮಾನ ಘೋಷಿಸಿರುತ್ತಾರೆ. ಎಂದು ಸಿ.ಪಿ.ಐ ಚಂದ್ರಶೇಖರ್ ಜಿ.ನಾಯಕ ತಿಳಿಸಿದರು.