ಬೈಕ್ ಕಳ್ಳರ ಬಂಧನ:13 ಬೈಕ್ ಜಪ್ತಿ

ವಿಜಯಪುರ:ಮೇ.3: ಬೈಕ್‍ಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೆÇಲೀಸರು ಬಂಧಿಸಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ತೌಸಿಫ್ ಕಲಾದಗಿ, ಮುರ್ತುಜಸಾಬ್ ಖಾನ್ ಬಂಧಿತ ಆರೋಪಿಗಳು.
ಇನ್ನೂ ಬಂಧಿತರಿಂದ 6.20 ಲಕ್ಷ ಮೌಲ್ಯದ 13 ಬೈಕ್‍ಗಳನ್ನು ಪೆÇಲೀಸರು ಜಪ್ತಿಗೈದಿದ್ದಾರೆ. ಅಲ್ಲದೇ, ಆರೋಪಿಗಳ ವಿರುದ್ಧ 16 ಕೇಸ್‍ಗಳಲ್ಲಿ ಭಾಗಿಯಾಗಿದ್ದರು. ಮಹಾರಾಷ್ಟ್ರದ ಕೊಲ್ಲಾಪ, ಸೊಲ್ಲಾಪುರ, ಜಿಲ್ಲೆಯ ಸಿಂದಗಿ, ತಾಳಿಕೋಟೆ, ಹುಬ್ಬಳ್ಳಿ ಸೇರಿದಂತೆ ನಾನಾ ಕಡೆಗೆ ಬೈಕ್ ಕಳ್ಳತನ ಮಾಡಿದ್ದರು. ಈ ಕುರಿತು ಗಾಂಧಿಚೌಕ್ ಪೆÇಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.