ಬೈಕ್ ಕಳ್ಳರ ಬಂಧನ : 1.3 ಲಕ್ಷ ಮೌಲ್ಯದ ಬೈಕ್‍ಗಳು ವಶ

ಬೀದರ:ಜೂ.1: ಮೇಹಕರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿಯ ಹಲಸಿ(ಎಲ್), ಮೇಹಕರ ಹಾಗೂ ವಾಂಜರಖೇಡಾ ಗ್ರಾಮಗಳಲ್ಲಿ ಸುಮಾರು ದಿನಗಳಿಂದ ಪದೇ ಪದೇ ಮೋಟಾರ ಸೈಕಲಗಳು ಕಳ್ಳತನವಾಗಿದ್ದರಿಂದ ಪೊಲೀಸರಿಗೆ ತಲೆ ಬಿಸಿಯಾಗಿ ಪರಿಣಮಿಸಿತ್ತು.

ದಿನಾಂಕ: 27, 28-05-2021ರಂದು ರಾತ್ರಿ ವೇಳೆ ಪುನಃ ವಾಂಜರಖೇಡ ಗ್ರಾಮದಲ್ಲಿ ಮೊಟಾರ ಸೈಕಲ ಕಳ್ಳತನವಾಗಿದ್ದರಿಂದ ಪ್ರಕರಣ ದಾಖಲಿಸಿಕೊಂಡು, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ನಾಗೇಶ ಡಿ.ಎಲ್, ಹೆಚ್ಚುವರಿ ಎಸ್.ಪಿ ಗೋಪಾಲ್ ಎಮ್. ಬ್ಯಾಕೋಡ್, ಉಪ ಪೋಲಿಸ್ ವರಿಷ್ಟಾಧಿಕಾರಿ ದೇವರಾಜ ಬಿ, ಸಿಪಿಐ ಗ್ರಾಮೀಣ ವೃತ್ತ ಭಾಲ್ಕಿ ಅವರ ಮಾರ್ಗದರ್ಶನದಲ್ಲಿ, ತನಿಖೆ ಪ್ರಾರಂಭಿಸಿ ಮೇಹಕರ ಠಾಣೆಯ ಪಿ.ಎಸ.ಐ ನಂದಕುಮಾರ ಹಾಗೂ ಅವರ ತಂಡ ಕಳ್ಳರನ್ನು ಬಂಧಿಸಲು ಯಶ್ವಸಿಯಾಗಿದ್ದು, ಮಹಾರಾಷ್ಟ್ರ ರಾಜ್ಯದ ಶಹಾಜನಿ ಔರಾದ್ ಮೂಲದ ಆರೋಪಿ ತನಾದರಾಜು ಅಕಲಿಯಾಸ ಶರದ ತಂದೆ ವೆಂಕಟರಾವ ದಾಬಕೆ, ಮತ್ತು ಅದೇ ಪಟ್ಟಣದ ಸಂಗಮೇಶ ಅಲಿಯಾಸ ವಾಂಟೇಡ ತಂದೆ ಉಮಾಕಾಂತ ಕಾಂಬಳೆ ಇವರ ವಶದಿಂದ ಮೇಹಕರ ಪೊಲೀಸ್ ಠಾಣೆಯ 03 ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ 39 ಸಾವಿರ ಮೌಲ್ಯದ ಎರಡು ಮೋಟಾರ ಸೈಕಲಗಳು ಮತ್ತು 4 ಸಾವಿರ ನಗದು ಹಣ ಇದಲ್ಲದೇ ಮೇಹಕರ ಗ್ರಾಮದಲ್ಲಿ ಒಂದು ಮೋಟಾರ ಸೈಕಲ್ ಮತ್ತು ಹುಲಸೂರ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಎರಡು ಮೋಟಾರ ಸೈಕಲಗಳು ಒಟ್ಟು 60,000/- ಸದರಿ ಆರೋಪಿತರಿಂದ ಜಪ್ತಿ ಮಾಡಿಕೊಂಡಿದ್ದು, ಹೀಗೆ ಒಟ್ಟು 05 ಮೋಟಾರ ಸೈಕಲಗಳು ಮತ್ತು ನಗದು ಹಣ 4000/- ರೂ ಸೇರಿದಂತೆ ಒಟ್ಟು, 1,03,000/- ರೂ. ಮೌಲ್ಯದ ಮೋಟಾರ ಸೈಕಲಗಳು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ.

ಈ ಪ್ರಕರಣದಲ್ಲಿ ಅಂತರ ರಾಜ್ಯ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಎಸ್.ಪಿ ನಾಗೇಶ ಮೂಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.