ಬೈಕ್ ಕಳ್ಳನ ಸೆರೆ ೪ ಲಕ್ಷ ಮಾಲು ವಶ

ಬೆಂಗಳೂರು, ಜು.೨೨-ಬಾಣಸವಾಡಿ ಪೊಲೀಸರು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಖದೀಮನೊಬ್ಬನನ್ನು ಬಂಧಿಸಿ ೪ ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಥಣಿಸಂದ್ರದ ಅಶ್ವತ್ಥ ನಗರದ ಶೇಖ್ ಅರ್ಬಾಜ್ ಖಾನ್ ಅಲಿಯಾಸ್ ಅರ್ಬಾಜ್(೨೫)ಬಂಧಿತ ಆರೋಪಿಯಾಗಿದ್ದು ಆತನಿಂದ ೪ ಲಕ್ಷ ಮೌಲ್ಯದ ೫ ದ್ವಿಚಕ್ರ ವಾಹನಗಳ ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ಡಾ.ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
ಆರೋಪಿಯು ಬಾಣಸವಾಡಿಯ ಪ್ರದೇಶವೊಂದರಲ್ಲಿ ಬೈಕ್ ಕಳವು ಮಾಡಿದ ಪ್ರಕರಣವನ್ನು ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ.ಆರೋಪಿಯು ಹಿಂದೆ ನಡೆಸಿದ್ದ ೪ ದ್ವಿಚಕ್ರ ವಾಹನ ಕಳವು ಪ್ರಕರಣ ಹಾಗೂ ಯಶವಂತಪುರ ಪೊಲೀಸ್ ಠಾಣೆಯ ೧ ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದರು.