ಬೈಕ್ ಕಳ್ಳನ ಬಂಧಿಸಿ 13 ಬೈಕ್ ಜಪ್ತಿ

ಕಲಬುರಗಿ,ಜು.28-ನಗರದ ವಿವಿಧೆಡೆ ಬೈಕ್ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಅಶೋಕ ನಗರ ಪೊಲೀಸರು ಬಂಧಿಸಿ 6 ಲಕ್ಷ ರೂ.ಮೌಲ್ಯದ 13 ಬೈಕ್ ಜಪ್ತಿ ಮಾಡಿದ್ದಾರೆ.
ಕಪನೂರದ ಸಿದ್ದಾರೂಢ ಕಾಲೋನಿಯ ಫತ್ರು ಷಾ ತಂದೆ ಪಾಶಾ ಧರ್ವೇಶ (22) ಬಂಧಿತ ಆರೋಪಿ.
ಬಸವನಗರದ ಶಿವಮೂರ್ತಿ ಶೃಂಗೇರಿ ಎಂಬುವವರ ಬೈಕ್ ಕಳ್ಳತನವಾಗಿತ್ತು. ಈ ಸಂಬಂಧ ಅವರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಎಸಿಬಿ ಗಿರೀಶ ಎಸ್.ಬಿ.ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಪಂಡಿತ ಸಗರ, ಎ.ಎಸ್.ಐ ನಿಂಗಪ್ಪ, ವೈಜನಾಥ, ಸಿಬ್ಬಂದಿಗಳಾದ ಭೀಮಾಶಂಕರ, ಶಿವಲಿಂಗ, ನೀಲಕಂಠ ಅವರು ತನಿಖೆ ನಡೆಸಿ ಆರೋಪಿಯನ್ನು ಕಣ್ಣಿ ಮಾರುಕಟ್ಟೆ ಬಳಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.