ಬೈಕ್ ಕಳ್ಳನ ಬಂಧನ

ಲಕ್ಷ್ಮೇಶ್ವರ,ಜೂ19: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪಟ್ಟಣದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಸಪ್ಪ ಯಲ್ಲಪ್ಪ ಮೋಡಕೇರ (21) ಬಂಧಿತ ಆರೋಪಿ. ವಿವಿಧ ಕಂಪನಿಯ 4 ಬೈಕ್‍ಗಳನ್ನು ಕಳ್ಳತನ ಮಾಡಿ ಲಕ್ಷ್ಮೇಶ್ವರ ತಾಲೂಕಿನ ಪೊಲೀಸ್ ಠಾಣಾ ವ್ಯಾಪ್ತಿಯ ಬೂದಿಹಾಳ ಗ್ರಾಮದಲ್ಲಿ ಬೈಕ್‍ಗಳನ್ನು ಬಚ್ಚಿಟ್ಟಿ ವೇಳೆಯಲ್ಲಿ ಪೊಲೀಸ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದಾರೆ. ಗದಗ ಜಿಲ್ಲಾ ಎಸ್‍ಪಿ ಬಿ.ಎಸ್.ನೇಮಗೌಡರ, ಡಿವೈಎಸ್‍ಪಿ ಹಾಗೂ ಸಿಪಿಐ ವಿಕಾಸ ಲಮಾಣಿ ಅವರ ಮಾರ್ಗದರ್ಶನದಲ್ಲಿ ಪಿಎಸ್‍ಐ ಯೂಸೂಫ್ ಜಮೂಲಾ, ಜಿ.ವಿ.ಪವಾರ ಅವರ ನೃತೃತ್ವದ ತಂಡವು ಕಳ್ಳನನ್ನು ಬಂಧಿಸಿದ್ದಾರೆ. ಸುಮಾರು 4 ಲಕ್ಷ ಮೌಲ್ಯದ ನಾಲ್ಕು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡದಲ್ಲಿ ಎಎಸ್‍ಐ ಟಿ.ಕೆ.ರಾಠೋಡ, ವೈ.ಎಸ್.ಕೂಬಿಹಾಳ, ಜಿ.ಎಂ.ಬೂದಿಹಾಳ ಹಾಗೂ ಸಿಬ್ಬಂದಿಗಳಾದ ಎಮ್.ಎ.ಶೇಖ್, ಎಂ.ಡಿ.ಲಮಾಣಿ, ಎಚ್.ಬಿ.ಕಲ್ಲಣ್ಣವರ, ಡಿ.ಎಸ್.ನದಾಫ್, ಜಿ.ಆರ್.ಗ್ರಾಮಪುರೋಹಿತ, ರಾಮು ಮಾಳೋತ್ತರ, ಎಂ.ಎಸ್.ಬಳ್ಳಾರಿ, ಎಸ್.ಎಫ್.ತಡಸ, ಪಿ.ಎಂ.ಥೋರಾತ್ ಕೆ.ಜಿ.ಹುಲಗೂರ, ಮಹಾದೇವ ಲಮಾಣಿ ಇದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬೈಕ್ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾದ ಎಲ್ಲ ಪೊಲೀಸ್ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಶ್ಲ್ಯಾಘಿಸಿದ್ದಾರೆ.