ಬೈಕ್ ಕಳ್ಳನ ಬಂಧನ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಆ.5: ಪಟ್ಟಣದ ಪೋಲೀಸ್ ಠಾಣಾ ಸಿಬ್ಬಂದಿಯಿಂದ ಇಂದು ಬೆಳ್ಳಂಬೆಳಗ್ಗೆ ದಸ್ತಗಿರಿ, ಬೈಕ್ ಕಳ್ಳನ ಬಂಧನ.
ಇಂದು ಬೆಳಗ್ಗಿನ ಜಾವ ಪಟ್ಟಣದ ಹೊರ ಹೊಲದಲ್ಲಿರುವ ರಾಯದುರ್ಗ ಮತ್ತು ಮೊಳಕಾಲ್ಮೂರು ಸಂಪರ್ಕ ವಿರುವ ರಾಜ್ಯ ಹೆದ್ದಾರಿ  (ಪ್ಲಾನ್ ಟೇಷನ್) ಬಳಿ ಪೋಲೀಸ್ ರು ದಸ್ತಗಿರಿ ಮಾಡುವ ಸಮಯದಲ್ಲಿ ರಾಯದುರ್ಗ ಕಡೆಯಿಂದ ಬಂದ   ಬೈಕ್ ಸವಾರ ನನ್ನು ವಿಚಾರಿಸಿದಾಗ ಅವನು ಕದ್ದ ಬೈಕ್ ನಲ್ಲಿ ಬಂದಿದಾನೆ ಎಂದು ತಿಳಿದು ಬಂದಿದ್ದು, ಅವನನ್ನು ದಸ್ತಗಿರಿ ಮಾಡಿದಾಗ ಎರಡು ಬೈಕ್ ಗಳು ಪತ್ತೆ ಯಾಗಿವೆ .ಸ್ಥಳೀಯ ಪೋಲೀಸ್ ಠಾಣೆಯಲ್ಲಿ ಎರಡು ಬೈಕ್ ಕಳವು ಪ್ರಕರಣಗಳು ಇದು ದ್ದರಿಂದ ಪರಿಶೀಲನೆ ನಡೆಸಿದಾಗ ಬೈಕ್ ಗಳು ಪತ್ತೆ ಯಾಗಿವೆ.
ಅರೋಪಿಯು ರಾಯದುರ್ಗ ವಾಸಿ ಯಾಗಿದ್ದು, ಅಬ್ದುಲ್ ರೆಹಮಾನ್ ತಂದೆ ಶಬೀರ್, 21ವರ್ಷ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಪಿಎಸ್ಐಗಳಾದ ಜಿ. ಪಾಂಡುರಂಗಪ್ಪ, ಈರೇಶ್, ಎಎಸ್ ಐ ತಿಮ್ಮಣ್ಣ, ಎಚ್, ಸಿ,  ಚಾಂದ್ ಬಾಷ, ಪ್ರಭು ದೇವ್, ಶಿವಾನಂದ , ನರೇಶ್ ಇನ್ನು ಮುಂತಾವರಿದ್ದರು.

One attachment • Scanned by Gmail