
ದೇವದುರ್ಗ,ಮಾ.೧೭- ಪಟ್ಟಣ ಸೇರಿ ತಾಲೂಕಿನಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದವನನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಗುರುವಾರ ಬಂಧಿಸಿದ್ದಾರೆ.
ಮೋತಿ ಮಸೀದ್ ಹತ್ತಿರ ನಿವಾಸಿ ಅಬ್ದುಲ್ ಮುಕ್ತಿಯಾರ್ ರಶೀದ್ ಬಂಧಿತ ಆರೋಪಿ. ಆರೋಪಿ ಜೆಪಿ ವೃತ್ತ ಹಾಗೂ ಬಸ್ ನಿಲ್ದಾಣ ಸೇರಿ ವಿವಿಧೆಡೆ ಕಳ್ಳತನ ಮಾಡಿ ಬಚ್ಚಿಟ್ಟಿದ್ದ ಸುಮಾರು ೩ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ ಆರು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಒಂದು ಲ್ಯಾಪ್‌ಟಾಪ್ ಜಪ್ತಿ ಮಾಡಲಾಗಿದೆ ಎಂದು ಪಿಐ ಕೆ.ಹೊಸಕೇರಪ್ಪ ತಿಳಿಸಿದ್ದಾರೆ.