ಬೈಕ್ ಕಳವು : ಇಬ್ಬರ ಬಂಧನ

ಶಿವಮೊಗ್ಗ, ಮೇ 17: ಜಿಲ್ಲೆಯ ಸೊರಬ ಠಾಣೆ ಪೊಲೀಸರು ವಿವಿಧೆಡೆ ಬೈಕ್ ಕಳವು ಮಾಡಿದ್ದ ಆರೋಪದ ಮೇರೆಗೆ ಪೊಲೀಸರು ಇಬ್ಬರನ್ನು ಬಂಧಿಸಿದ ಘಟನೆ ನಡೆದಿದೆ.
ಹಾವೇರಿ ಜಿಲ್ಲೆಯ ಜುಂಜಪ್ಪ ಮತ್ತು ಹಲಗೂರು ಗ್ರಾಮದ ಗದಿಗೆಪ್ಪ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಇವರಿಂದ ವಿವಿಧೆಡೆ ಕಳವು ಮಾಡಿದ್ದ ನಾಲ್ಕು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.ಸೊರಬ ತಾಲೂಕಿನ ಹುಣವಳ್ಳಿ ಗ್ರಾಮದ ವರ್ಗೀಸ್ ಎಂಬುವರ ಬೈಕ್ ಕಳುವಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸುವ ವೇಳೆ, ಈ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು. ಈ ವೇಳೆ ವಿವಿಧೆಡೆ ಬೈಕ್ ಕಳವು ಮಾಡಿದ್ದ ವಿವರ ಬೆಳಕಿಗೆ ಬಂದಿತ್ತು.