ಬೈಕ್ ಕದಿಯುತ್ತಿದ್ದ ಬಳ್ಳಾರಿಯ ಸುರೇಶ್ಓರ್ವಾಯಿಯ ಕರೀಂ ಅಂದರ್ ಕುರುಗೋಡು ಪೊಲೀಸರಿಂದ 25 ಬೈಕ್ ವಶ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.12: ಜಿಲ್ಲೆಯ ಹಲವಡೆಗಳಲ್ಲಿ ಬೈಕ್ ಗಳನ್ನು ಕದ್ದು, ಅವು ಸೀಜ್ ಮಾಡಿದ ಗಾಡಿಗಳೆಂದು ಕಡಿಮೆ ಬೆಲೆಗೆ ಮಾರಾಟ ಮಾಡಿ ಮಜಾ ಮಾಡುತ್ತಿದ್ದ ಇಬ್ಬರು ಕತ್ರನಾಕ್ ಬೈಕ್ ಕಳ್ಳರನ್ನು ಕುರುಗೋಡು ಪೊಲೀಸರು 25 ಬೈಕ್ ಗಳ ಸಮೇತ  ಬಂದಿಸಿದ್ದಾರೆ.
ತೋರಣಗಲ್ಲು ಡಿವೈಎಸ್ಪಿ ಪ್ರಸಾದ್ ಗೋಕುಲೆ ಅವರ ಮಾರ್ಗದರ್ಶನದಲ್ಲಿ ಕುರುಗೋಡು ಠಾಣೆಯ ಪೊಲೀಸ್ ಅಧಿಕಾರಿಗಳಾದ  ಜಯಪ್ರಕಾಶ್, ಸುಪ್ರೀತ್, ಲೋಕರಾಜ್ ಮತ್ತವರ ಸಿಬ್ಬಂದಿ. ಕುರುಗೋಡಿನಲ್ಲಿ ಬಳ್ಳಾರಿಯ ಶಾಂತಿನಗರದಲ್ಲಿ ಹೆಸರಿಗೆ ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡು ಬೈಕ್ ಕದಿಯುತ್ತಿದ್ದ ಸುರೇಶ್ (27) ಮತ್ತು ಹೆಸರಿಗೆ ವ್ಯವಸಾಯ ಮಾಡುತ್ತಿದ್ದುದು ಬೈಕ್ ಕಳ್ಳತನ ಮಾಡುತ್ತಿದ್ದ  ಕುರುಗೋಡು ತಾಲೂಕಿನ ಓರ್ವಾಯಿ ಗ್ರಾಮದ ಕರೀಂ(35) ಎಂಬುವವರನ್ನು ಬಂಧಿಸಿ. ಅವರು ಈವರಗೆ ದರೋಜಿ, ಬಳ್ಳಾರಿ, ಕಂಪ್ಲಿ, ಕುಡುತಿನಿ ಸೇರಿದಂತೆ ಹಲವಡೆ ಕದ್ದ 25 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಿಬ್ಬರನ್ನು ಜೈಲಿಗೆ ಕಳಿಸಲಾಗಿದೆ.
ಈ ಕಾರ್ಯವನ್ನು ಎಸ್ಪಿ ರಂಜಿತ್ ಕುಮಾರ್ ಬಂಡಾರು, ಎಎಸ್ಪಿ ರವಿಕುಮಾರ್ ಅವರು ಶ್ಲಾಘಿಸಿದ್ದಾರೆ.

One attachment • Scanned by Gmail