ಬೈಕ್ ಏರಿ ಮತದಾನ ಜಾಗೃತಿ ಮೂಡಿಸಿದ ಸ್ವೀಪ್ ಸಮಿತಿ

ಸೇಡಂ,ಎ,22: ಇಲ್ಲಿನ ತಾಲೂಕು ಪಂಚಾಯಿತಿ ಸಂಭಾಂಗಣದಿಂದ ವಾಸವದತ್ತ ಸಿಮೆಂಟ್ ಕಂಪನಿವರೆಗೆ ಹಾಗೂ ಮರಳಿ ಬಸವೇಶ್ವರ ವೃತ್ತ, ಬಸ್ಟಾಂಡ್ವರೆಗೆ ವಿಭಿನ್ನವಾಗಿ ತಾಲೂಕ ಸ್ವೀಪ್ ಸಮಿತಿ ವತಿಯಿಂದ ದ್ವಿಚಕ್ರ ವಾಹನ ಮೂಲಕ ಮತದಾರರ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ತಾಲೂಕ ಸಹಾಯಕ ಮತದಾರರ ಚುನಾವಣಾಧಿಕಾರಿ ಆಶಪ್ಪ ಪೂಜಾರಿ ಮತದಾರರ ಜಾಗೃತಿ ಪ್ರತಿಜ್ಞಾವಿಧಿ ಬಸವೇಶ್ವರ ವೃತ್ತದಲ್ಲಿ ಬೋಧಿಸಿದರು.

ಈ ವೇಳೆಯಲ್ಲಿ ತಹಸಿಲ್ದಾರ್ ಶಿವಾನಂದ ಮೇತ್ರೆ, ತಾಪಂ ಇಓ ಚನ್ನಪ್ಪ ರಾಯಣ್ಣನವರ, ಗ್ರೇಡ್ ಟು ತಹಸಿಲ್ದಾರ್ ಸಿದ್ದರಾಮ ನಾಚವರ, ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಉಮಾಪತಿ ರಾಜು, ಪುರಸಭೆ ಮುಖ್ಯಾಧಿಕಾರಿ ಶರಣಯ್ಯ ಸ್ವಾಮಿ, ಸರ್ಕಾರಿ ನೌಕರರ ಅಧ್ಯಕ್ಷ ಶಿವಶಂಕರಯ್ಯ ಸ್ವಾಮಿ, ಶರಣಗೌಡ ಪಾಟೀಲ್, ರವಿಕುಮಾರ್ ಸೇರದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಬಹಳ ಸಿಬ್ಬಂದಿ ವರ್ಗದವರು ಇದ್ದರು.

ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಸಂವಿಧಾನದ ಹಕ್ಕು ಕರ್ತವ್ಯ ಪಾಲಿಸಿ ಕಡ್ಡಾಯವಾಗಿ ಮತದಾನ ಮಾಡಿ.
ಆಶಪ್ಪ ಪೂಜಾರಿ
ಸಹಾಯಕ ಚುನಾವಣಾಧಿಕಾರಿ ಸೇಡಂ