
ಜಗಳೂರು.ಮೇ.೨೩:- ತಾಲೂಕಿನ ಉದ್ದಗಟ್ಟ ಕ್ರಾಸ್ ಬಳಿ ಆಪೇ ಆಟೋ ಹಾಗೂ ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ ಜಗಳೂರು ಶಾಖೆ ಬ್ಯಾಂಕ್ ಕ್ಷೇತ್ರಾಧಿಕಾರಿ ಹಾಲಸ್ವಾಮಿ(51) ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಹಾಲಸ್ವಾಮಿ ಡಿಡಿಸಿಸಿ ಬ್ಯಾಂಕ್ ಕ್ಷೇತ್ರಧಿಕಾರಿಯಾಗಿ ಜಗಳೂರು ತಾಲೂಕಿನಲ್ಲಿ ಉತ್ತಮ ಸೇವೆ ಮಾಡುವ ಮೂಲಕ ಅಪಾರ ಜನರ ಮತ್ತು ರೈತರ ವಿಶ್ವಾಸ ಗಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.ತಮ್ಮ ಬ್ಯಾಂಕಿನ ಕೆಲಸ ಮುಗಿಸಿಕೊಂಡು ರಾತ್ರಿ ಜಗಳೂರಿನಿಂದ ಸ್ವಗ್ರಾಮವಾದ ಹಿರೇಮಲ್ಲನಹೊಳೆಗೆ ದ್ವಿಚಕ್ರ ವಾಹನದಲ್ಲಿ ಹೊರಟ್ಟಿದ್ದಾಗ ಉದ್ದಗಟ್ಟ ಕ್ರಾಸ್ ಬಳಿ ಆಪೇ ಆಟೋ ನಡುವೆ ಭೀಕರ ಅಪಘಾತದಲ್ಲಿ ತಲೆ ಭಾಗ ಸೀಳಿ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಮೃತ ದೇಹವನ್ನು ಪಟ್ಟಣದ ಸರಕಾರಿ ಆಸ್ಪತ್ರೆ ಶವಾಗಾರ ದಲ್ಲಿರಸಲಾಗಿದೆ. ಕುಟುಂಬಸ್ಥರ ಮತ್ತು ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿದೆಸ್ಥಳಕ್ಕೆ ಆತ್ಮೀಯ ಸ್ನೇಹಿತರಾದ ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ.ಸಿ.ಆರ್ ತಿಮ್ಮಣ್ಣ.ಸೂರಲಿಂಗ ಪ್ಪ.ತಹಶಿಲ್ದಾರ್ ಜಿ.ಸಂತೋಷ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ. ಯಾದವ ಸಮಾಜದ ಹಿರಿಯ ಮುಖಂಡರು ಹಾಗೂ ಸ್ನೇಹಿತರು ಭೇಟಿ ನೀಡಿ ಸಂಬಂಧಿಕರಿಗೆ,ಕುಟುಂಬದ ವರಿಗೆ ಧೈರ್ಯ ತುಂಬಿದರು.