ಬೈಕ್ ಅಪಘಾತ- ಮಾಜಿ ಸೈನಿಕ ಸಾವು

ಹಗರಿಬೊಮ್ಮನಹಳ್ಳಿ.ಡಿ.೨೭ ತಾಲೂಕಿನ ಆನಂದವನ ಹಳ್ಳಿ ಗ್ರಾಮದ ಡಾಬಾ ಹತ್ತಿರ ರಾತ್ರಿ ಸುಮಾರು ನಿಂತಂತ ಕಬ್ಬಿನ ಲಾರಿಗೆ ಬೈಕ್ ಡಿಕ್ಕಿಯಾಗಿ ಮಾಜಿ ಸೈನಿಕ ಆರ್.ವಿ. ದೇಸಾಯಿ(46) ಸ್ಥಳದಲ್ಲಿ ಮೃತ ಪಟ್ಟಿರುತ್ತಾನೆ.
ಹಳೆ ಹಗರಿಬೊಮ್ಮನಹಳ್ಳಿ ನಿವಾಸಿಯಾಗಿರುವ ಇವರು ಹೊಸಪೇಟೆಯಿಂದ ಪಟ್ಟಣಕ್ಕೆ ಆಗಮಿಸುತ್ತಿರುವಾಗ ರಸ್ತೆಯಲ್ಲಿ ನಿಂತಿರುವ ಕಬ್ಬಿನ ಲಾರಿಗೆ ಹಿಂದಿನಿಂದ ಗುದ್ದಿದ ಪರಿಣಾಮ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತ ನಾಗಿರುತ್ತಾನೆ. ಇವರ ಸ್ವಗ್ರಾಮ ಕೋಡಿಹಳ್ಳಿ ಮಾಜಿ ಸೈನಿಕ ಕೊಪ್ಪಳದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಈತನ ಅಗಲಿಕೆಯಿಂದ ಇವರ ಕುಟುಂಬ ಚಿಂತಾಕ್ರಾಂತರಾಗಿದ್ದಾರೆ. ಈ ಪ್ರಕರಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಸ್ಥಳಕ್ಕೆ ಪಿಎಸ್ಐ ವೈಶಾಲಿ ಝಳಕಿ ಭೇಟಿ ನೀಡಿದ್ದರು