ಬೈಕ್ ಅಪಘಾತ ಗ್ರಾ ಪಂ ಉಪಾಧ್ಯಕ್ಷೆಯ ಪತಿ ಸಾವು


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಏ.20 ತಾಲೂಕಿನ ವಲ್ಲಾಬಾಪುರ ಗ್ರಾಮದ ಬಳಿ ಬೈಕ್ ಗೆ ಮತ್ತೊಂದು ಬೈಕ್ ಅಡ್ಡ ಬಂದು ಡಿಕ್ಕಿ ಆದ ಕಾರಣ ಹಿಂಬದಿ ಸವಾರ ಸಾವನಪ್ಪಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
 ಮೃತ ವ್ಯಕ್ತಿ ಸಿದ್ದೇಶ್ (40) ಹ್ಯಾಳ್ ಗ್ರಾಮದ ನಿವಾಸಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ಶಿಲ್ಪಾಳ   ಪತಿಯಾಗಿದ್ದು ನಿನ್ನೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್ ಭೀಮ ನಾಯ್ಕ್  ನಾಮಪತ್ರ ಸಲ್ಲಿಸಲು ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು  ಹ್ಯಾಳ್ ಗ್ರಾಮದಿಂದ ಆಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತ ಸಿದ್ದೇಶ್ ಮತ್ತು ಆತನ ಸ್ನೇಹಿತ ಗ್ರಾಮಕ್ಕೆ ವಾಪಸ್ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಬೈಕ್ ಓಡಿಸುತ್ತಿದ್ದ ಕೊಟ್ರೇಶ್ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.