ಬೈಕ್ ಅಪಘಾತ: ಅಪರಿಚಿತ ವ್ಯಕ್ತಿ ಸಾವು

ವಾಡಿ: ಮೇ.27:ನಡೆದುಕೊಂಡು ಹೋಗುತ್ತಿದ್ದ ಅಪರಿಚಿತ ವ್ಯಕ್ತಿಯೋರ್ವನಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯ 150ರ ಕೆ.ಬಿ ಶಾಣಪ್ಪ ಅವರ ತೋಟದ ಹತ್ತಿರ, ಸೋಮವಾರ ತಡರಾತ್ರಿ ಬೈಕ್ ಅಪಘಾತ ಸಂಭವಿಸಿದ್ದು ಅಪರಿಚಿತ ವ್ಯಕ್ತಿ ಮೃತಪಟ್ಟ ಘಟನೆ ಬುಧುವಾರ ಬೆಳಿಗ್ಗೆ ಗೊತ್ತಾಗಿದೆ. ಮೃತ ವ್ಯಕ್ತಿಯ ವಿಳಾಸ ಹಾಗೂ ಸಂಬಂಧಿಕರ ಮಾಹಿತಿ ತಿಳಿದು ಬಂದಿಲ್ಲ. 35ರಿಂದ 40 ವರ್ಷ ಅಂದಾಜು ವಯಸ್ಸು ಇರುತ್ತದೆ.
ಹುಟ್ಟು ಹಬ್ಬದ ಪಾರ್ಟಿ ಮುಗಿಸಿಕೊಂಡು ಶಹಾಬಾದಿಂದ ಕಮರವಾಡಿ ಗ್ರಾಮಕ್ಕೆ ಬರುತ್ತಿದ್ದ ಬೈಕ್ ಸವಾರರು, ಏಕಾಏಕಿ ಅಪರಿಚಿತ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಘಟನ ಸ್ಥಳಕ್ಕೆ ಶಹಾಬಾದ ಡಿವೈಎಸ್‍ಪಿ ಉಮೇಶ ಚಿಕ್ಕಮಠ, ಚಿತ್ತಾಪುರ ಸಿಪಿಐ ಕೃಷ್ಣಪ್ಪ ಕಲ್ಲದೇವರ, ವಾಡಿ ಠಾಣೆಯ ಪಿಎಸ್‍ಐ ವಿಜಯಕುಮಾರ ಭಾವಗಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಈ ಕುರಿತು ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಹಿತಿಗಾಗಿ ಮೊ; 9480803574 ಸಂಪರ್ಕಿಸಲು ಕೊರಲಾಗಿದೆ.