ಬೈಕ್‌ ಸ್ಕಿಡ್‌: ಗಾಯಾಳು ಮೃತ್ಯು

ಮಂಜೇಶ್ವರ, ನ.೧೫- ಬೈಕ್‌ ಸ್ಕಿಡ್‌ ಆಗಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ವರ್ಕಾಡಿ ನಿವಾಸಿಯೋರ್ವರು ಮೃತಪಟ್ಟ ಘಟನೆ ನಡೆದಿದೆ.

ವರ್ಕಾಡಿ ಪಾತೂರು ದೇವಿಗದ್ದೆಯ ರಾಮಣ್ಣ (65)ಮೃತಪಟ್ಟವರು. ಕಡಂಬಾರ್‌ನಲ್ಲಿ ಬೈಕ್‌ ಸ್ಕಿಡ್‌ ಆಗಿದ್ದು ಗಂಭೀರ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.