ಬೈಕ್‌-ಡಿಯೋ ಅಪಘಾತ: ಸವಾರ ಮೃತ್ಯು

ಇಂದು ನಸುಕಿನ ಜಾವ ಚೆಂಬುಗುಡ್ಡೆಯಲ್ಲಿ ನಡೆದ ಅಪಘಾತ

ತೊಕ್ಕೊಟ್ಟು, ಡಿ.೨೬- ಬೈಕ್ – ಡಿಯೋ ನಡುವೆ ಅಪಘಾತ ನಡೆದು ಬೈಕ್‌ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ಇಂದು ನಸುಕಿನ ಜಾವ ಇಲ್ಲಿನ ಸಮೀಪದ ಚೆಂಬುಗುಡ್ಡೆಯಲ್ಲಿ ನಡೆದಿದೆ.

ಮೃತ ಬೈಕ್‌ ಸವಾರನನ್ನು ಸಂತೋಷ್ ನಗರ ನಿವಾಸಿ ಸಂದೇಶ್ ಕೆರೆಬೈಲ್ (40) ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಸಂದೇಶ್ ಕೊಲ್ಯ ದೇವಸ್ಥಾನದಲ್ಲಿ ನಡೆದ ವಾರ್ಷಿಕ ಉತ್ಸವದಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದ್ದು ತಲೆಗೆ ತೀವ್ರ ಗಾಯಗೊಂಡ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತರು ಅವಿವಾಹಿತರಾಗಿದ್ದು ಅವರು ಓರ್ವ ಸಹೋದರಿ ಮತ್ತು ತಾಯಿಯನ್ನು ಅಗಲಿದ್ದಾರೆ. ಅವರು ಪೇಂಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೊರೊನಾ ಕಾರಣದಿಂದ ಅವರ ಕೆಲಸವಿಲ್ಲದ ಕಾರಣ ಅವರು ಬಳಿಕ ಕೊಲ್ಯಾದಲ್ಲಿ ಮೀನುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದರು.

ಈ ಬಗ್ಗೆ ನಾಗುರಿಯ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.