ಬೈಕ್‌ನಿಂದ ಬಿದ್ದು ಯುವಕ ಸಾವು


ದಾವಣಗೆರೆ.ನ.೩; ಬೈಕ್ ನಿಂದ ಬಿದ್ದು ಯುವಕ ಸಾವುಕಂಡಿರುವ ಘಟನೆ ದಾವಣಗೆರೆ ಸಮೀಪದ ಲೋಕಿಕೆರೆ ಗ್ರಾಮದ ಬಳಿ ನಡೆದಿದೆ. ಬೀರೇಶ್ (೩೨) ಮೃತ ದುರ್ದೈವಿ.ಈತ ದಾವಣಗೆರೆಯಿಂದ ಲೋಕಿಕೆರೆ ಗ್ರಾಮಕ್ಕೆ ಹೋಗುವಾಗ ಘಟನೆ ನಡೆದಿದೆ.
ಬೀರೇಶ್ ಬೈಕ್‌ನಲ್ಲಿ ಬರುವಾಗ ಆಯತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಹದಡಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಕೈಗೊಂಡಿದ್ದಾರೆ. ಪ್ರಕರಣ ಹದಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.