ಬೈಕ್‌ಗೆ ಲಾರಿ ಡಿಕ್ಕಿ: ಯುವಕ ಮೃತ್ಯು

ಉಡುಪಿ, ಎ.೨- ಶಿವಮೊಗ್ಗ ಜಿಲ್ಲೆಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಸ್ತಿಕಟ್ಟೆ ಯಡೂರು ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಉಡುಪಿ ಪೆರಂಪಳ್ಳಿಯ ಯುವಕನೋರ್ವ ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ಮೃತರನ್ನು ಉಡುಪಿ ಪೆರಂಪಳ್ಳಿ ನಿವಾಸಿ ಜೋಸೆಫ್ ಗೋಮ್ಸ್(೨೮) ಎಂದು ಗುರುತಿಸಲಾಗಿದೆ. ಇವರು ಇತರ ಸ್ನೇಹಿತರೊಂದಿಗೆ ಸ್ನೇಹಿತನೋರ್ವನ ಮನೆಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಲಾರಿ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಗೋಮ್ಸ್ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.