ಬೈಕ್‍ಗಳ ನಡುವೆ ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

ಕಲಬುರಗಿ,ಫೆ.5-ನಗರ ಹೊರವಲಯದ ಬೇಲೂರ್ ಕ್ರಾಸ್‍ನಲ್ಲಿ ಎರಡು ಬೈಕ್‍ಗಳ ನಡುವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು, ಇಬ್ಬರಿಗೆ ಗಾಯಗಳಾದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ಮೃತನನ್ನು ಕಲಬುರಗಿಯ ಭವಾನಿ ನಗರದ ರೇವಣಸಿದ್ದಪ್ಪ ತಂದೆ ಶಾಂತವೀರ ಬೇನೂರ (26) ಎಂದು ಗುರುತಿಸಲಾಗಿದೆ.
ಮಂಜುನಾಥ ತಂದೆ ಪರಮೇಶ್ವರ ಮತ್ತು ಉಪಳಾಂವ ಗ್ರಾಮದ ಜಗದೀಶ ತಂದೆ ಶರಣಪ್ಪ ಡೋಣಿ ಎಂಬುವವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.