ಬೈಕ್‍ಗಳ ಡಿಕ್ಕಿ: ಸವಾರರಿಬ್ಬರು ಸಾವು

ಸಂಜೆವಾಣಿ ವಾರ್ತೆ
ಸರಗೂರು: ಆ.11:- ಹೆಚ್ ಡಿ ಕೋಟೆ ಕಡೆಗೆ ಬೈಕ್ ನಲ್ಲಿ ಹೋಗುತ್ತಿದ್ದ ದೇವೇಶ್ ಹಾಗೂ ಸರಗೂರು ಕಡೆಯಿಂದ ಹೆಚ್ ಡಿ ಕೋಟೆಗೆ ಹೋಗುತ್ತಿದ್ದ ಪ್ರಕಾಶ್ ನಾಯಕ ಹಾಗೂ ಈತನ ಪತ್ನಿ ಶ್ರುತಿಬಾಯಿ ಇವರುಗಳಿದ್ದ ಬೈಕ್ ಗಳಿಗೆ ನೇರ ನೇರ ಡಿಕ್ಕಿ ಹೊಡೆದ ಪರಿಣಾಮ ಎರಡು ಬೈಕ್ ಗಳ ನಡುವೆ ಮುಖಾಮುಖಿ ದೇವಲಾಪುರ ಗ್ರಾಮದ ಸಿದ್ದಪ್ಪಾಜಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಸವಾರರಿಬ್ಬರು ಸಾವು.
ನೆಮ್ಮನಹಳ್ಳಿ ಗ್ರಾಮದ ದೇವೇಶ್ (46) ಇವರಿಗೆ ಒಂದು ಹೆಣ್ಣು, ಒಂದು ಗಂಡು ಮಕ್ಕಳಿದ್ದು ವ್ಯಾಸಂಗ ಮಾಡುತ್ತಿದ್ದಾರೆ. ಹಾಗೂ ಇದೇ ಗ್ರಾಮದ ಪಕ್ಕದ ಬಾವಿಕೆರೆ (ಹಾಳೆಪಡಗು) ಲಂಬಾಣಿ ಕಾಲೋನಿಯ ಪ್ರಕಾಶ್ ನಾಯಕ (36) ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.ಹಾಗೂ ಪ್ರಕಾಶ್ ನಾಯಕನ ಹೆಂಡತಿ ಶೃತಿಭಾಯಿರವರಿಗೆ ಕಾಲು ಮುರಿದಿದ್ದು, ಕಣ್ಣಿನ ಗುಡ್ಡೆ ಹಾಗೂ ತಲೆಯ ಬಾಗಕ್ಕೆ ತೀವ್ರತರ ಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇತಳಿಗೆ ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯುವಾಗ ಇತಳ ಸಂಬಂಧಿಕರು ಹಣಕ್ಕಾಗಿ ಪರದಾಡುತ್ತಿರುವುದು ಕಂಡುಬಂದಿತು. ಏಕೆಂದರೆ ಇವರು ತುಂಬಾ ಕಡುಬಡವರಾಗಿದ್ದು ಇವರಿಗೆ ಯಾವುದೇ ಜಮೀನು ಒಗೈರೆ ಇರುವುದಿಲ್ಲ. ಹಾಗೂ ಈತಳಿಗೆ ಎರಡು ಸಣ್ಣ ಪುಟ್ಟ ಮಕ್ಕಳಿದ್ದು, ಹೆಣ್ಣು ಮಗು 6 ನೇ ತರಗತಿ ಹಾಗೂ ಗಂಡು ಮಗು 4 ನೇ ತರಗತಿ ತಮ್ಮ ಊರಿನ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿವೆ.
ಈ ಸಂಬಂಧ ವಿಷಯ ತಿಳಿದು ಸರಗೂರು ಪೆÇಲೀಸ್ ಠಾಣೆಯ ವೃತ ನಿರೀಕ್ಷಕರು ಲಕ್ಷ್ಮಿಕಾಂತ್ ಹಾಗೂ ಉಪನಿರೀಕ್ಷಕ ನಂದೀಶ್ ಕುಮಾರ್ ಸಿ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲು ಹೆಚ್‍ಡಿ ಕೋಟೆ ಸಾರ್ವಜನಿಕರ ಆಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆಯನ್ನು ಡಾ” ಶ್ರೀನಿವಾಸ್ ರವರು ನೆರವೇರಿಸಿ ವಾರಸುದಾರರಿಗೆ ಶವವನ್ನು ನೀಡಲಾಯಿತು.
ಈ ಸುದ್ದಿ ತಿಳಿದು ಊರಿನಲ್ಲಿ ಹಾಗೂ ಆಸ್ಪತ್ರೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಸಂಬಂಧ ಸರಗೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.