
ಸೈಂಟ್ ಪೀಟರ್ಸ್‌ಬರ್ಗ್ (ರಷ್ಯಾ), ಎ.೮- ಅಮೆರಿಕಾ ಪರ ಬೇಹುಗಾರಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುಎಸ್ ಪತ್ರಕರ್ತಕರ್ತನೊಬ್ಬನ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಇವಾನ್ ಗೆರ್ಷ್ಕೊವಿಚ್ (೩೧) ಎಂಬವರು ವಾಲ್ ಸ್ಟ್ರೀಟ್ ಜರ್ನಲ್ (ಡಬ್ಲ್ಯುಎಸ್‌ಜೆ) ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅತ್ಯಂತ ಅನುಭವಿ ಪತ್ರಕರ್ತರಾಗಿದ್ದರು. ಆದರೆ ಕಳೆದ ವಾರ ಅಮೆರಿಕಾ ಪರ ಬೇಹುಗಾರಿಕೆಯಲ್ಲಿ ತೊಡಗಿದ್ದ ಆರೋಪದ ಹಿನ್ನೆಲೆಯಲ್ಲಿ ರಷ್ಯಾದ ಯೆಕಟೆರಿನ್ಬರ್ಗ್ ನಗರದಲ್ಲಿ ಬಂಧಿಸಲಾಗಿದೆ. ಇನ್ನು ಮಾಧ್ಯಮಗಳ ವರದಿಗಳ ಪ್ರಕಾರ ಇವಾನ್ ತಮ್ಮ ಮೇಲಿನ ಬೇಹುಗಾರಿಕಾ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದು, ಅಲ್ಲದೆ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಡಬ್ಲ್ಯುಎಸ್‌ಜೆ ಆಗ್ರಹಿಸಿದೆ. ಬುಧವಾರ ಮಧ್ಯಾಹ್ನ ಮಾಸ್ಕೋದಿಂದ ಪೂರ್ವಕ್ಕೆ ೧,೬೦೦ ಕಿಮೀ (೧,೦೦೦ ಮೈಲುಗಳು) ಯಕಟೆರಿನ್‌ಬರ್ಗ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಇವಾನ್ ತನ್ನ ಸಂಪಾದಕರೊಂದಿಗೆ ಸಂಪರ್ಕವನ್ನು ಕಳೆದುಕೊಂಡಿದ್ದಾನೆ. ನಾವು ಮೊದಲಿನಿಂದಲೂ ಹೇಳಿದಂತೆ, ಈ ಆರೋಪಗಳು ವರ್ಗೀಯವಾಗಿ ಸುಳ್ಳು ಮತ್ತು ನ್ಯಾಯಸಮ್ಮತವಲ್ಲ, ಮತ್ತು ನಾವು ಇವಾನ್ ಅವರ ತಕ್ಷಣದ ಬಿಡುಗಡೆಗೆ ಒತ್ತಾಯಿಸುತ್ತೇವೆ ಎಂದು ಡಬ್ಲ್ಯುಎಸ್‌ಜೆ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಆದರೆ ಅತ್ತ ರಷ್ಯಾ ಬೇರೆ ರೀತಿಯ ತರ್ಕ ಮಂಡಿಸಿದ್ದು, ಇವಾನ್ ಅವರನ್ನು ರೆಡ್ ಹ್ಯಾಂಡಾಗಿ ಬಂಧಿಸಲಾಗಿದೆ ಎಂದು ಪ್ರತಿಕ್ರಿಯೆ ನೀಡಿದೆ. ಇವಾನ್ ಮಾಸ್ಕೋದಲ್ಲಿರುವ ವಿದೇಶಿ ಪತ್ರಕರ್ತರಿಗೆ ಹೆಚ್ಚು ಚಿರಪರಿಚಿತರಾಗಿದ್ದು, ಉತ್ತಮ ವರದಿಗಾರಿಕೆ ನಡೆಸುತ್ತಿದ್ದರು ಎನ್ನಲಾಗಿದೆ. ಇನ್ನು ಇವಾನ್ ಬಂಧನ ಪ್ರಕ್ರಿಯೆ ಬಗ್ಗೆ ಅಮೆರಿಕಾದ ಶ್ವೇತಭವನ ಖಂಡನೆ ವ್ಯಕ್ತಪಡಿಸಿದೆ.
ಅಮೆರಿಕಾದ ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ ಹಿನ್ನೆಲೆಯಲ್ಲಿ ಇವಾನ್‌ರನ್ನು ಬಂಧಿಸಲಾಗಿದೆ. ಇವಾನ್ ರಷ್ಯಾದ ರಕ್ಷಣಾ ಉದ್ಯಮದ ಚಟುವಟಿಕೆಗಳ ಬಗ್ಗೆ ವರ್ಗೀಕರಿಸಿದ ಮಾಹಿತಿಗಳನ್ನು ರಹಸ್ಯವನ್ನು ಸಂಗ್ರಹಿಸಿದ್ದಾರೆ. ಇವಾನ್‌ರ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ.
-ರಷ್ಯಾದ ಎಫ್‌ಎಸ್‌ಬಿ ಭದ್ರತಾ
ಸೇವೆ ತನ್ನ ಹೇಳಿಕೆಯಲ್ಲಿ