ಬೇಸಿಗೆ ಶಿಬಿರ ಪ್ರತಿಭೆ ಹೆಚ್ಚಳಕ್ಕೆ ಸಹಕಾರಿ

ಕೋಲಾರ,ಎ,೧೭:ಮಕ್ಕಳು ಬೇಸಿಗೆಯಲ್ಲಿ ಅನಾವಶ್ಯಕವಾಗಿ ತಿರುಗುವುದನ್ನು ಬಿಟ್ಟು ಇಂತಹ ಶಿಬಿರಗಳಲ್ಲಿ ಪಾಲ್ಗೊಂಡು ಪಠ್ಯ ವಸ್ತುವಿಗೆ ಭಿನ್ನವಾಗಿ ವಿಶೇಷ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದು ಗಮನ ಮಹಿಳಾ ಒಕ್ಕೂಟದ ಮುಖ್ಯಸ್ಥೆ ಶಾಂತಮ್ಮ ಕg ನೀಡಿದರು.
ನಗರದ ರಂಗ ಇಂಚರ ಟ್ರಸ್ಟ್ , ಇಂಚರ ಸಾಹಿತ್ಯ ಕುಟೀರದ ವತಿಯಿಂದ ತಾಲ್ಲೂಕಿನ ಚಾಕರಸನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಲಿಪಿಲಿ ಮಕ್ಕಳ ಮೇಳ ಬೇಸಿಗೆ
ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್ ಮಾತನಾಡಿ ಎಲ್ಲಾ ಶಿಕ್ಷಕರು ರಜೆಗಳಲ್ಲಿ ಮನೆಗಳಲ್ಲಿದ್ದರೆ ಮುಖ್ಯ ಶಿಕ್ಷಕ ಡಾ.ಇಂಚರ ನಾರಾಯಣಸ್ವಾಮಿ ಮಾತ್ರ ಸುಮಾರು ೧೫ ವರ್ಷಗಳಿಂದ ತಾನಿರುವ ಶಾಲೆಗಳಲ್ಲಿ ಈ ರೀತಿಯಾದಂತಹ ಬೇಸಿಗೆ ಶಿಬಿರಗಳನ್ನು ಹಮ್ಮಿಕೊಂಡು ಮಕ್ಕಳಲ್ಲಿ ಇರುವಂತ ವಿಶೇಷ ಚೈತನ್ಯವನ್ನು ಗುರುತಿಸಿ ಜಿಲ್ಲಾ ಮಟ್ಟ ರಾಜ್ಯಮಟ್ಟಗಳಲ್ಲಿ ರಾಷ್ಟ್ರಮಟ್ಟದವರೆಗೂ ಮಕ್ಕಳನ್ನ ತೊಡಗಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಇದೇ ಪ್ರಪ್ರಥಮವಾಗಿ ಚಾಕರಸನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಈ ಬೇಸಿಗೆ ಶಿಬಿರದಲ್ಲಿ ಮಕ್ಕಳು ಶಿಬಿರದ ಉಪಯೋಗವನ್ನು ಪಡೆದುಕೊಂಡು ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕೆಂದು ಕರೆಯಿತ್ತರು.
ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಬಿ.ಶಿವಕುಮಾರ್ ಶಿಬಿರವನ್ನು ಕುರಿತು ಗ್ರಾಮದ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಂಜುನಾಥ್,ರಂಗ ಇಂಚರ ಟ್ರಸ್ಟ್ ಅಧ್ಯಕ್ಷ ಡಾ.ಇಂಚರ ನಾರಾಯಣಸ್ವಾಮಿ ಕೆಲ ಮಾಹಿತಿ ನೀಡಿದರು.
ಶಿಕ್ಷಕರಾದ ಬಿ.ವಿ. ನಂಜುಂಡಪ್ಪ ಮತ್ತು ವೈ ವೆಂಕಟೇಶ್ ಮಕ್ಕಳನ್ನು ರಂಜಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಎನ್.ಜಿ.ಐಶ್ವರ್ಯ, ಎ.ಚಂದ್ರಶೇಖರ್, ಎನ್.ಸರಸ್ವತಿ ಕಾರ್ಯನಿರ್ವಹಿಸಿದರು.