ಬೇಸಿಗೆ ಶಿಬಿರ : ಚಿತ್ರಗಳ ಮೂಲಕ ಮಕ್ಕಳಿಂದ ಮತದಾನ ಜಾಗೃತಿ

ದಾವಣಗೆರೆ, ಏ. 15; ಬೇಸಿಗೆ ರಜೆ ಎಂದು ಮಕ್ಕಳು ಟಿವಿ, ಮೊಬೈಲ್ ನೋಡಿ ಕಾಲಹರಣ ಮಾಡದೇ ಇಂತಹ ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಚಿತ್ರಕಲೆ, ಕ್ರೀಡೆ, ಸಂಗೀತದAತಹ ಪಠ್ಯೇತರ ಚಟುವಟಿಕೆಗಳನ್ನು ಕಲಿಯಲು ಸಹಕಾರಿಯಾಗಲಿದೆ ಎಂದು ದಾವಣಗೆರೆ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಧಾರುಕೇಶ ಅಭಿಪ್ರಾಯ ಪಟ್ಟರು. ಇಲ್ಲಿನ ವಿನೋಬನಗರದ 1ನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ಮುರುಘರಾಜೇಂದ್ರ ಪ್ರೌಢಶಾಲೆಯಲ್ಲಿ ನಡೆದ ಬೇಸಿಗೆ ಶಿಬಿರದಲ್ಲಿ ಮಕ್ಕಳಿಂದ ಚಿತ್ರಕಲೆ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮವನ್ನು ವೀಕ್ಷಿಸಿ, ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು, ನಿಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣಕ್ಕೆ ಇಂತಹ ಬೇಸಿಗೆ ಶಿಬಿರಗಳು ವೇದಿಕೆಯನ್ನು ಕಲ್ಪಿಸಿಕೊಡಲಿವೆ. ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಿರಿ ಎಂದು ಕರೆ ನೀಡಿದರು.