ಬೇಸಿಗೆ ರಜೆ – ಕಲಿಕೆಯ ಮೂಲಕ ಕಳೆಯಲು ಉಚಿತ ಶಿಬಿರ


ಸಂಜೆವಾಣಿ ವಾರ್ತೆ
ಸಂಡೂರು : ಏ:18: ಮಕ್ಕಳಿಗೆ ಬೇಸಿಗೆ ಎಂದಾರೆ ಹಿಂದಿನ ಕಾಲದಲ್ಲಿ ಅಜ್ಜನ ಮನೆ, ತೋಟ, ಗದ್ದೆ, ಎಂದು ಸುತ್ತುತ್ತಿದ್ದರು, ಅದರೆ ಇಂದು ಅವರಿಗೆ ಅತಿ ಅಗತ್ಯವಾದ ಉಚಿತವಾಗಿ ಸಂಗೀತ, ರಂಗೋಲಿ, ಇತರ ಕರಕುಶಲ ಕಲೆಯನ್ನು ಕಲಿಸಲು ಜೀವನ್ ಸಂಗೀತ ಸೇವಾ ಸಂಸ್ಥೆ ಮುಂದೆಬಂದಿರುವುದು ಬಹು ಉತ್ತಮವಾದ ಕಾರ್ಯವಾಗಿದೆ ಎಂದು ಸಂಡೂರು ವಿರಕ್ತಮಠದ ಪ್ರಭುಮಹಾಸ್ವಾಮಿಗಳು ತಿಳಿಸಿದರು.
ಅವರು ಇಂದು ಪಟ್ಟಣದ ವಿರಕ್ತಮಠದಲ್ಲಿ ಜೀವನ್ ಸಂಗೀತ ಸೇವಾ ಸಂಸ್ಥೆ ವತಿಯಿಂದ 10 ದಿನದ ಉಚಿತ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ ಮಕ್ಕಳು ಇಂದು ಬಹಳಷ್ಟುಬುದ್ದಿವಂತರಿದ್ದಾರೆ, ಅವರನ್ನು ಸರಿದಾರಿಯಲ್ಲಿ ಸಾಗಲು ಬರೀ ಪಾಠವಲ್ಲ ಅವರಲ್ಲಿಯ ಕಲೆ, ಸಂಗೀತ, ಸಾಹಿತ್ಯದಂತಹ ಚಟುವಟಿಕೆಗಳನ್ನು ಹೊರತರುವುದು ಅತಿ ಅಗತ್ಯವಾಗಿದೆ, ಇಂತಹ ಶಿಬಿರಗಳ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದರು.
ಅತಿಥಿಗಳಾಗಿ ಅಗಮಿಸಿದ ಜಿಂದಾಲ್ ಸಂಸ್ಥೇಯ ಅಧ್ಯಕ್ಷರಾಧ ರಾಜಶೇಖರ್ ಪಟ್ಟಣಶೆಟ್ಟಿಯವರ ಪತ್ನಿ ಸುರ್ವಣ ರಾಜಶೇಖರ್ ಮಾತನಾಡಿ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಅವರಿಗೆ ಉತ್ತಮವಾದ ಕಲಿಕೆಗೆ ಇದೊಂದು ಉತ್ತಮ ಕಾರ್ಯ ಇದಕ್ಕೆ ಪೂರ್ಣ ಸಹಕಾರ ನೀಡುವುದಲ್ಲದೆ ಇಂತಹ ಸಭೆಯಲ್ಲಿ ಭಾಗವಹಿಸಲು ಹೆಮ್ಮೆಯಾಗುತ್ತದೆ, ಅದ್ದರಿಂದ ಮಕ್ಕಳಲ್ಲಿಯ ಸೃಜನಶೀಲತೆ ಹೊರತರಲು ಸಾಧ್ಯ ಎಂದರು.
ಪರಿಸರ ಪ್ರೇಮಿ ವಿಶ್ವಮೂರ್ತಿಯವರು ಮಾತನಾಡಿ ಪರಿಸರದಲ್ಲಿ ಬೆಳೆಯುವ ಅಪರೂಪದ ಸಸ್ಯಗಳು, ಅದರಿಂದ ನಮಗಾಗುವ ಉಪಯೋಗಗಳು, ಅಲ್ಲದೆ ಅದರ ರಕ್ಷಣೆ ಕುರಿತು ಪೂರ್ಣ ಮಾಹಿತಿ ನೀಡಿದರು. ಶಿಬಿರದ ವಿವರಣೆಯನ್ನು ಅಧ್ಯಕ್ಷರಾದ ಗೀತಾ ವೀರೇಶ್ ರವರು ನೀಡಿದರು 110 ಮಕ್ಕಳು ಶಿಬಿರದಲ್ಲಿ ಹಾಜರಿದ್ದರು, ಅತಿಥಿಗಳಾಗಿ ಪ್ರಭುದೇವರ ಜನಕಲ್ಯಾಣ ಸಂಸ್ಥೆಯ ಗುಡೇಕೋಟೆ ನಾಗರಾಜ, ಜ್ಯೋತಿ ಗುಡೇಕೋಟೆ, ಜಿಂದಾಲ್‍ನ ಕಿರಣ್ ಪ್ರಭು,ನೀತಾ ನಾವಲ್ ,ಸೀತಾ ನಾಗೇಂದ್ರ ರವರು ಹಾಜರಿದ್ದರು, ಸುಮತಿ ನಿರೂಪಿಸಿದರು. ಕಾರ್ಯದರ್ಶಿಗಳಾದ ಪ್ರಿಯದರ್ಶಿನಿ, ಶಿಲ್ಪಾ, ನಿರ್ಮಲ, ಆಶಾ, ರೇಣುಕಾ, ಜಾಹ್ನವಿ, ಹಾಗೂ ಅಕ್ಕನ ಬಳಗದ ಸದಸ್ಯರುಗಳು ಉಪಸ್ಥಿತರಿದ್ದರು.