
ಕಲಬುರಗಿ,ಏ.3: ಬೇಸಿಗೆ ರಜೆಯಲ್ಲಿ ಮಕ್ಕಳನ್ನು ಮೊಬೈಲ ಗೀಳಿನಿಂದ ದೂರವಿಡಲು ಬೇಸಿಗೆ ಶಿಬಿರಗಳು ಸಹಾಯಕಾರಿ. ವಿವಿಧ ಶಾಲೆಯ ಮಕ್ಕಳು ಒಂದೆಡೆ ಸೇರಿ, ದಿನದಲ್ಲಿ ನಾಲ್ಕೈದು ಗಂಟೆಗಳ ವರೆಗೆ ಆನಂದಿಸುತ್ತ ಕಲಿಯುವುದು ಮಕ್ಕಳಿಗೆ ಒಂದು ತರಹದ ಮುದ ನೀಡುತ್ತದೆ. ಶಿಬಿರದಲ್ಲಿ ಮಕ್ಕಳಿಗೆ ಅಂಕಗಳ ಆತಂಕವಿರುವುದಿಲ್ಲ ಎಂದು ಸಿದ್ದಪ್ಪ ಭಗವತಿ ಅಭಿಪ್ರಾಯಪಟ್ಟರು.
ನಗರದ ರಾಮ ಮಂದಿರ ಹತ್ತಿರವಿರುವ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ಬೇಸಿಗೆ ಶಿಬಿರ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಸುವರ್ಣ ಭಗವತಿ, ಶೈಕ್ಷಣಿಕ ಸಂಯೋಜಕರಾದ ಸುಮಾ ಭಗವತಿ, ಸುಷ್ಮಾ ಭಗವತಿ, ತರಬೇತಿದಾರರು, ವಿವಿಧ ಶಾಲೆಯ ಮಕ್ಕಳು ಹಾಗೂ ಅವರ ಪಾಲಕರು ಹಾಜರಿದ್ದರು. ಅಂಬಿಕಾ ಸ್ವಾಗತಿಸಿದರು. ಉದಯಕುಮಾರ ವಂದಿಸಿದರು. ಶ್ರೀಪಾದ ನಾಯಕ ನಿರೂಪಿಸಿದರು.