ಬೇಸಿಗೆ ರಂಗ ತರಬೇತಿ ಶಿಬಿರಕ್ಕೆ ಚಾಲನೆ

ಕಲಬುರಗಿ:ಏ.14:ಕಲಬುರಗಿ ರಂಗಾಯಣದ ವತಿಯಿಂದ ಚಿಣ್ಣರ ಮೇಳ-2024 ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಬೇಸಿಗೆ ರಂಗ ತರಬೇತಿ ಶಿಬಿರಕ್ಕೆ ಕಲಬುರಗಿ ಎಸ್‍ಎಸ್‍ವಿ ಟಿವಿ ಚಾನೆಲ್‍ನ ನಿರ್ದೇಶಕರಾದ ಶಂಕರ ಕೋಡ್ಲಾ ಅವರು ರವಿವಾರ ಕಲಬುರಗಿ ರಂಗಾಯಣದಲ್ಲಿ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ಕಲಬುರಗಿ ರಂಗಾಯಣವು ಏಪ್ರಿಲ್ 5 ರಿಂದ ಮೇ 4 ರವರೆಗೆ ʻಚಿಣ್ಣರ ಮೇಳ-2024ʼ ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದು, ಮಕ್ಕಳ ಸಾಂಸ್ಕøತಿಕ ಸಂವೇದನೆಯನ್ನು ಚುರುಕುಗೊಳಿಸಲು ಈ ಶಿಬಿರದಲ್ಲಿ ನಡೆಯುವ ಕಲಾಚಟುವಟಿಕೆಗಳು ಪೂರಕವಾಗಿವೆ. ಮಕ್ಕಳಿಗೆ ನಾಟಕ ತರಬೇತಿ ನೀಡುತ್ತಾ ಚಿಣ್ಣರಲ್ಲಿ ರಂಗಸಂಸ್ಕøತಿಯನ್ನು ಬೆಳೆಸುವುದು, ಜಾನಪದ ಕಲಾಪ್ರಕಾರಗಳ ಪ್ರಾತ್ಯಕ್ಷಿಕೆ ಮತ್ತು ತರಬೇತಿ, ಮಕ್ಕಳ ಕರಕುಶಲ ತಯಾರಿಕೆ, ಮಕ್ಕಳಿಂದಲೆ ಸಾಹಿತ್ಯ ರಚನೆ, ಕಥೆ, ಕವನ, ಹನಿಗವನ ಇತ್ಯಾದಿ ಚಟುವಟಿಕೆಗಳೊಂದಿಗೆ ಅವರ ವ್ಯಕ್ತಿತ್ವ ವಿಕಸನಕ್ಕೆ ಸೃಜನಶೀಲಧ್ವನಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವುದೇ ಈ ʻಚಿಣ್ಣರ ಮೇಳ-2024ʼ ರಂಗ ತರಬೇತಿ ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಲಬುರಗಿ ಮಕ್ಕಳ ಸಾಹಿತಿ ಎ.ಕೆ ರಾಮೇಶ್ವರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಲಬುರಗಿ ಸಾಹಿತಿ ಡಾ. ಚಂದ್ರಕಲಾ ಬಿದರಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದರು. ಶಿಬಿರದ ನಿರ್ದೇಶಕ ಕಲ್ಯಾಣಿ ಭಜಂತ್ರಿ ಹಾಗೂ ಕಲಬುರಗಿ ರಂಗಾಯಣ ಉಪನಿರ್ದೇಶಕಿ ಜಗದೀಶ್ವರಿ ಅ. ನಾಶಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ರವರ ಜಯಂತಿ ಪ್ರಯುಕ್ತ ಎಲ್ಲಾ ಗಣ್ಯರು ಡಾ. ಬಿ.ಆರ್. ಅಂಬೇಡ್ಕರ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಿಸೆಸ್ ಅಂಬೇಡ್ಕರ್ ನಾಟಕ ಪ್ರದರ್ಶನಗೊಂಡಿತು. ಈ ಕಾರ್ಯಕ್ರಮದಲ್ಲಿ ಚಿಣ್ಣರು, ಪಾಲಕ-ಪೆÇೀಷಕರು ಮತ್ತು ಸಾರ್ವಜನಿಕರು ಪಾಲ್ಗೊಂಡಿದರು.