ಬೇಸಿಗೆ ಬೆಳೆಗೆ ನೀರು ಹರಿಸಲು
ಐಸಿಸಿ ಸಭೆಕರೆಯಲು ಆಗ್ರಹ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.09: ತುಂಗಭದ್ರ ಬಲದಂಡೆ ಮೇಲ್ಮಟ್ಟದ (ಎಲ್ ಎಲ್ ಸಿ) ಕಾಲುವೆಗೆ ಬೇಸಿಗೆ ಅವಧಿಯ ಬೆಳೆಗೆ ನೀರು ಸರಬರಾಜು ಕುರಿತು ದಿನಾಂಕ ನಿಗಧಿಪಡಿಸಲು ಕೂಡಲೇ ನೀರಾವರಿ ಸಲಹಾ ಸಮಿತಿ (ಐಸಿಸಿ)ಸಭೆ ಕರೆಯಬೇಕೆಂದು ತುಂಗಭದ್ರ ರೈತ ಸಂಘ ಆಗ್ರಹಿಸಿದೆ.
ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಬೇಸಿಗೆ ಅವಧಿ ಬೆಳೆಗೆ ನೀರು ನೀಡಲು
ಕಳೆದ ವರ್ಷ ನ18 ವರೆಗೆ  ವರ್ಷ ಐಸಿಸಿ ಸಭೆ ಕರೆದಿತ್ತು.ಈ ವರ್ಷ ಇನ್ನೊಂದು ವಾರದಲ್ಲಿ ಸಭೆ ಕರೆದು ನಿರ್ಣಯ ಪ್ರಕಟಿಸಲು ಆಗ್ರಹಿಸಿದರು.‌
ಬಿ.ಡಿ.ಹಳ್ಳಿಯ ಅಕ್ವಡೆಕ್ಟ್ ನ ಶಿಥಿಲತೆ ಹಿನ್ನಲೆಯಲ್ಲಿ ಕೆಳಭಾಗಕ್ಕೆ ನೀರು ಹರಿಸುವ ಬಗ್ಗೆ ರೈತರು ಗೊಂದಲ‌ ಇದ್ದಾರೆ. 
ನೀರು ಬಿಡದಿದ್ದರೆ. ಸಿರುಗುಪ್ಪ ತಾಲೂಕಿನ 26 ಹಳ್ಳಿಗಳು, ಗ್ರಾಮೀಣ ಕ್ಷೇತ್ರದ ಹತ್ತಾರು ಹಳ್ಳಿಗಳ ರೈತರು ನೀರಿನ ಸಮಸ್ಯೆ ಎದಿರುಸಬೇಕಾಗುತ್ತದೆ. ಅದಕ್ಕಾಗಿ ಕೂಡಲೇ ಸಭೆ ಕರೆದು ಹೆಚ್ ಎಲ್ ಸಿ  ಕಾಲುವೆಗೆ ಮಾ. 30 ವರೆಗೆ ಆನ್ ಅಂಡ್ ಆಪ್ ಪದ್ದತಿಯಲ್ಲಿ ಮತ್ತು ಎಲ್ ಎಲ್ ಸಿ ಕಾಲುವೆಗಳಿಗೆ  ಎ.10 ರವರೆಗೆ ನೀರು ಬಿಡಲು ನಿರ್ಧರಿಸಬೇಕು ಎಂದರು.
 ಅಕ್ವಡೆಕ್ಟ್ ಸ್ಥಂಭ ಕುಸಿತ:
ಬಿಡಿಹಳ್ಳಿ ಬಳಿಯ ಅಕ್ವಡೆಕ್ಟ್ ನ ಸ್ಥಂಭ ಕುಸಿಯಲು ಒಂದು ಅಕ್ರಮ ಮರಳು ಗಣಿಗಾರಿಕೆ, ಮತ್ತೊಂದು ಸೇತುವೆ ಅರ್ಧದಷ್ಟು ಭಾಗ ಹೂಳಿನಿಂದ ಆವರಿಸಿದ್ದು. ಅಧಿಕಾರಿಗಳು ಈ ಬಗ್ಗೆ ಮೊದಲೇ ಎಚ್ಚರಿಕೆಯಿಂದ ಅಕ್ರಮ ಮರಳು ಗಣಿಗಾರಿಕೆಗೆ ಬ್ರೇಕ್ ಹಾಕಬೇಕಿತ್ತು. ಅಲ್ಲದೆ ಈಗ ನಡೆದಿರುವ ಹೂಳು ತೆರವು ಕಾರ್ಯ ಮೊದಲೇ ಆಗ ಬೇಕಿತ್ತು ಎಂದರು.
 ಕರೆ ಸ್ವೀಕರಿಸಿ:
ಕಾಲುವೆಯ ದುರಸ್ಥಿ ಮತ್ತು ನೀರು ಸರಬರಾಜು ಕುರಿತು. ತುಂಗಭದ್ರ ಮಂಡಳಿಯ ಇಂಜಿನೀಯರ್ ಶ್ರೀಧರ ರೆಡ್ಡಿ ಅವರು ಮೊಬೈಲ್ ಕರೆ ಸ್ವೀಕರಿಸಲ್ಲ.
8106548678 ಈ ನಂಬರ್ ಗೆ ಕರೆ ಸ್ವೀಕರಿಸುವ ವರೆಗೆ ರೈತರೆಲ್ಲ ಕರೆ ಮಾಡಿ ಎಂದು ಪುರುಷೋತ್ತಮಗೌಡ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಜಾಲಿಹಾಳ್ ಶ್ರೀಧರ್, ರಂಜಾನ್ ಸಾಬ್, ವೀರಭದ್ರಪ್ಪ, ಜೆ.ದೊಡ್ಡಬಸವನಗೌಡ, ವೀರನಗೌಡ, ಬಸವರಾಜ್, ಶೇಕ್ಷಾವಲಿ ಮೊದಲಾದವರು ಇದ್ದರು.