ಬೇಸಿಗೆ ಬೆಳೆಗೆ ನೀರು ನಿರ್ಧಾರಕ್ಕೆ ಐಸಿಸಿ ಸಭೆ ಕರೆಯಲು ತುಂಗಭದ್ರ ರೈತ ಸಂಘ ಒತ್ತಾಯ

ಬಳ್ಳಾರಿ ನ 03 : ರಾಜ್ಯದ ತುಂಗ ಮತ್ತು ಭದ್ರ ಜಲಾಶಯಗಳು ಈ ವರ್ಷ ವೂ ಭರ್ತಿಯಾಗಿದ್ದು. ತುಂಗಭದ್ರ ಜಲಾಶಯಕ್ಕೆ ಇಲ್ಲಿಯವರೆಗೆ 100 ಟಿ.ಎಮ್.ಸಿ ನೀರು ಶೇಕರಣೆಯಾಗಿದೆ. ತಕ್ಷಣ ತುಂಗಭದ್ರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆ ಕರೆದು, ಬಳ್ಳಾರಿ, ಕೊಪ್ಪಳ, ರಾಯಚೂರ ಜಿಲ್ಲೆಗಳ ಎರಡನೇ (ಬೇಸಿಗೆ)ಬೆಳೆಗೆ ನೀರಿನ ಒಪ್ಪಿಗೆ ಸೂಚಿಸಿ ರೈತರಿಗೆ ಮಾಹಿತಿ ನೀಡಬೇಕೆಂದು ತುಂಗಭದ್ರ ರೈತ ಸಂಘ ಮನವಿ‌ ಮಾಡಿದೆ.
ಈ ಬಗ್ಗೆ ಇಂದು ಜಿಲ್ಲಾಡಳಿತಕ್ಕೆ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಮತ್ತಿತರರು ಮನವಿ ಸಲ್ಲಿಸಿ ಈ ಬಗ್ಗೆ ಕೂಡಲೇ ನಿರ್ಧಾರ ಪ್ರಕಟಿಸಬೇಕು ಎಂದಿದ್ದಾರೆ.
ಅಲ್ಲದೆ ಇದೆ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯಾದ್ಯಂತ ಹೆಚ್.ಎಲ್.ಸಿ. ಕಾಲುವ, ಎಲ್.ಎಲ್.ಸಿ. ಕಾಲುವೆ, ತುಂಗಭದ್ರ ನದಿ, ವೇದಾವತಿ ನದಿ ಹಾಗೂ ತುಂಗಭದ್ರ ಜಲಾಶಯದ ನೀರಿನಾಧ್ಯಂತಹ ರೈತರು ಸುಮಾರು ನಾಲ್ಕು ಲಕ್ಷ ಎಕರೆಯಲ್ಲಿ ರೈತರು ಭತ್ತವನ್ನು ಬೆಳೆದಿರುತ್ತಾರೆ.
ಹಿಂದಿನ ವರ್ಷವು ಭತ್ತ ಖರೀದಿದಾರರು ಇಲ್ಲದೇ ರೈತರು ನೋವನ್ನು ಅನುಭವಿಸಿದ್ದಾರೆ. ಈ ವರ್ಷವು ಸಹ ಭತ್ತ ಖರೀದಿದಾರರು ಇಲ್ಲದೇ ಹಿಂದಿನ ವರ್ಷಕ್ಕಿಂತಲು, ಈ ವರ್ಷವು ಭತ್ತದ ದರವು 200 ರೂ ಕಡಿಮೆಯಾಗಿ ಕೇವಲ ಕ್ವಿಂಟಲ್‌ಗೆ 1400 ರೂಪಾಯಿಯಂತೆ ಸೋನಾಮಸರಿ ಭತ್ತ ಕೇಳುತ್ತಿದ್ದಾರೆ.
ಅದಕ್ಕಾಗಿ ಸರ್ಕಾರದ ಬೆಂಬಲ ಬೆಲೆ 1990 ರೂ ಇದ್ದು. ಸರ್ಕಾರ ಬೆಲೆಗೂ ಭತ್ತ ಮಾರಾಟವಾಗತ್ತಿಲ್ಲ. ಸರ್ಕಾರ ಭತ್ತ ಖರೀದಿ ಕೇಂದ್ರವನ್ನು ಪ್ರಾರಂಭಿಸಿದರು ಒಬ್ಬ ರೈತರಿಂದ ಕೇವಲ 40 ಕ್ವಿಂಟಲ್ ಭತ್ತ ಮಾತ್ರ ಖರೀದಿಸುತ್ತಾರೆ. ಇನ್ನುಳಿದ ರೈತರು ಬೆಳೆದ ಹೆಚ್ಚುವರಿ ಭತ್ತವನ್ನು ಯಾರಿಗೆ ಮಾರಾಟ ಮಾಡಬೇಕು.
ತೆಲಂಗಾಣ ರಾಜ್ಯದಲ್ಲಿ ರೈತರು ಬೆಳೆದ ಸಂಪೂರ್ಣ ಭತ್ತವನ್ನು ಸರ್ಕಾರವೇ ಖರೀದಿಸಿ ರೈತರಿಗೆ ಒಂದು ವಾರದಲ್ಲಿ ಸರ್ಕಾರವೇ ಚೆಕ್ ಮೂಲಕ ಹಣ ಪಾವತಿಸುತ್ತದೆ.
ಅದೇ ರೀತಿ ಸರ್ಕಾರವು ತಕ್ಷಣವೇ ಎಚ್ಚೆತ್ತುಕೊಂಡು ತೆಲಂಗಾಣ ಮಾದರಿಯಲ್ಲಿ ರೈತರ ಬೆಳೆದ ಭತ್ತವನ್ನು ಸಂಪೂರ್ಣವಾಗಿ ಖರೀದಿಸಬೇಕು ಹಾಗೂ ಕೇಂದ್ರ ಸರ್ಕಾರದಿಂದ ಮಾತುಕತೆ ನಡೆಸಿ, ಅಕ್ಕಿಯನ್ನು ಬೇರೆ ದೇಶಕ್ಕೆ ರಫ್ತು ಮಾಡಲು ಆದೇಶ ನೀಡಿ, ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು‌ ಮನವಿ‌ ಮಾಡಿದ್ದಾರೆ.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಾವತಿ ವೀರೇಶ್, ಜಿಲ್ಲಾ ಸಹಕಾರ್ಯದರ್ಶಿ ಶ್ರೀಧರಗಡ್ಡೆ ವೀರನಗೌಡ , ಜಿಲ್ಲಾ ಉಪಾಧ್ಯಕ್ಷ ಜಾಲಿಹಾಳ್ ಶ್ರೀಧರ್ ಮುಖಂಡರುಗಳಾದ ದರೂರು ರಂಜಾನ್‌ಸಾಬ್, ಸತ್ಯನಾರಾಯಣರಾವ್,ರಾಮು, ಶ್ರೀ ಪುಟ್ಟಯ್ಯ, ಶಂಶತ್ ಬೇಗಂ, ಕೊಂಚಗೇರಿ ಮಲ್ಲಪ್ಪ, ಗೆಣಿಕೆಹಾಳ ಶರಣನಗೌಡ,
ದರೂರು ವೀರಭದ್ರ ನಾಯ್ಕ ಮೊದಲಾದವರು ಇದ್ದರು