ಬೇಸಿಗೆ ಬೆಳೆಗೆ ಕಾಲುವೆಗೆ ನೀರು ಹರಿಸದಿದ್ದರೆ ಚುನಾವಣೆ ಬಹಿಷ್ಕಾರ ರೈತ ಸಂಘ ಎಚ್ಚರಿಕೆ

ಲಿಂಗಸುಗೂರ,ಏ.೧೫- ತಾಲೂಕಿನ ರೈತರ ಜಮೀನುಗಳಿಗೆ ನೀರು ಹರಿಸಲು ಅಧಿಕಾರಿಗಳು ಮೀನಾ ಮೇಷ ಮಾಡುವ ಅಧಿಕಾರಿಗಳ ವಿರುದ್ಧ ಇಂದು ಪಟ್ಟಣದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೈತ ಸಂಘದ ಹಸಿರು ಸೇನೆ ಅಧ್ಯಕ್ಷ ಶಿವಪುತ್ರಗೌಡ ಜಾಗೀರನಂದಿಹಾಳ ಇವರು ಎರಡು ದಿನಗಳಲ್ಲಿ ರಾಂಪುರ ಏತ ನೀರಾವರಿ ಕಾಲುವೆಗೆ ನೀರು ಹರಿಸದಿದ್ದರೆ ಚುನಾವಣೆ ಬಹಿಷ್ಕಾರ ಹಾಕುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ರೈತರ ಸಂಕಷ್ಟ ನಿವಾರಿಸಲು ಚುನಾಯಿತ ಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಜನಪ್ರತಿನಿಧಿಗಳು ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ. ಆದರೆ ರೈತರಿಗೆ ಕೃಷಿ ಚಟುವಟಿಕೆ ತೊಡಗಿರುವ ರೈತರಿಗೆ ನೀರು ಹರಿಸಲು ಇವರಿಗೆ ಸಮಯವಿಲ್ಲ ಎಂದು ಜನಪ್ರತಿನಿಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರ ಕೈಗಾರಿಕಾ ವಲಯ ಕಂಪನಿಗಳಿಗೆ ನೀರು ಇರುತ್ತದೆ ಆದರೆ ರೈತರ ಜಮೀನುಗಳಿಗೆ ನೀರು ಹರಿಸಲು ನೀರು ಇಲ್ಲಾ ಎನ್ನುವುದು ರೈತರ ಬಾಳಿನಲ್ಲಿ ರಾಜಕೀಯ ರಾಜ್ಯ ಸರ್ಕಾರ ದ್ವಂದ್ವ ನಿಲುವು ತೋರಿದೆ ಎಂದು ಖಾಜವಲಿ ಆಕ್ರೋಶ ವ್ಯಕ್ತಪಡಿಸಿದರು.
ಲಿಂಗಸುಗೂರ ತಾಲೂಕಿನಲ್ಲಿ ರಾಂಪುರ ಏತ ನೀರಾವರಿ ಕಾಲುವೆ ನೀರು ನಂಬಿರುವ ಗ್ರಾಮಗಳ ರೈತರು ಬೆಳೆದ ಬೆಳೆಗಳಿಗೆ ನೀರು ಹರಿಸದಿದ್ದರೆ ಸುಮಾರು ೧೫ ಗ್ರಾಮದ ರೈತರು ಹಾಗೂ ಗ್ರಾಮೀಣ ಜನರು ಚುನಾವಣೆ ಬಹಿಷ್ಕಾರ ಹಾಕುವುದಾಗಿ ಹೇಳಿಕೆ ನೀಡಿ ಗ್ರಾಮದ ರೈತರು ಎಚ್ಚರಿಕೆ ನೀಡಿದರು .
ಈ ಸಂದರ್ಭದಲ್ಲಿ ಸಂಗನಗೌಡ, ಸಹದೇವಪ್ಪ, ಜಾಫರ್ ಸಾಬ್, ಉಸ್ಮಾನ್ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.