ಬೇಸಿಗೆ ಬಿಸಿಲ ಆಘಾತ: ಆರೋಗ್ಯ ಇಲಾಖೆ ಸಲಹೆ

ಕಲಬುರಗಿ,ಮಾ.5: ಬೇಸಿಗೆ ಸಂದರ್ಭದಲ್ಲಿ ಸಾರ್ವಜನಿಕರು ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳ ಕುರಿತು
ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಅಧಿಕಾರಿಗಳು ಸಲಹೆಗಳನ್ನು ನೀಡಿದ್ದಾರೆ.
ಹೆಚ್ಚು ನೀರುಕುಡಿಯುವುದು, ಮನೆಯಲ್ಲಿಯೇ ಸಿದ್ಧಪಡಿಸಿದ ನಿಂಬೆ ಹಣ್ಣಿನ ಶರಬತ್ತು,ಮಜ್ಜಿಗೆ,ಲಸ್ಸಿ,ಹಣ್ಣಿನ ಜ್ಯೂಸ್‍ಗಳನ್ನು ಒಂದುಚಿಟಿಕೆಉಪ್ಪಿನೊಂದಿಗೆ ಸೇವಿಸುವುದುಉತ್ತಮ.ತಿಳಿ ಬಣ್ಣದ, ಸಡಿಲವಾದ ಹತ್ತಿಯ ಬಟ್ಟೆಯನ್ನುಧರಿಸುವುದು.
ಬಿಸಿಲಿನಲ್ಲಿ ಹೊರ ಹೋಗುವ ಸಂದರ್ಭದಲ್ಲಿಛತ್ರಿ, ಟೋಪಿ,ಹ್ಯಾಟ್,ಟಾವೆಲ್‍ಅಥವಾಇನ್ನಾವುದೇ ಸಾಂಪ್ರದಾಯಿಕ ಪರ್ಧದತಿಯನ್ನು ಅನುಸರಿಸಿ ಬಿಸಿಲಿನಿಂದರಕ್ಷಣೆ ಪಡೆಯುವುದುಉತ್ತಮ.ಸಾಧ್ಯವಾದಷ್ಟು ಒಳಾಂಗಣದಲ್ಲಿರಿ.ನೇರವಾಗಿ ಸೂರ್ಯ ಬೆಳಕು ಹಾಗೂ ಬಿಸಿ ಗಾಳಿಯು ಮನೆಯ ಒಳಗೆ ಬರದಂತೆತಡೆಯಲು ಹಗಲು ಹೊತ್ತಿನಲ್ಲಿ ಕಿಟಕಿಗಳನ್ನು ಪರದೆಗಳಿಂದ ಮುಚ್ಚಿರಿ ಹಾಗೂ ತಣ್ಣನೆಯ ಗಾಳಿಯ ಸಂಚಾರಕ್ಕೆ ಅನುಕೂಲವಾಗುವಂತೆರಾತ್ರಿಯ ಹೊತ್ತು ಕಿಟಕಿಗಳನ್ನು ತೆರೆದಿಡಿ.ನವಜಾತ ಶಿಶುಗಳು ಹಾಗೂ ಚಿಕ್ಕ ಮಕ್ಕಳು,ಗರ್ಭಿಣಿಯರು,ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು.
ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು,ವಿಶೇಷವಾಗಿ ಹೃದ್ರೋಗ ಹಾಘೂ ರಕ್ತದಒತ್ತಡದಿಂದ ಬಳಲುತ್ತಿರುವವರು.
ಮಧ್ಯಾನ್ಹ 12 ಗಂಟೆಯನಂತರ ಹೊರಹೋಗುವುದನ್ನುತಪ್ಪಿಸಬೇಕು.ಮಧ್ಯಾನ್ಹದ ಸಂದರ್ಭದಲ್ಲಿ ಶ್ರಮದಾಯಕ ಹೊರಾಂಗಣ ಚಟುವಟಿಕೆಗಳನ್ನು ಕೈಗೊಳ್ಳಬಾರದು.ಸಾಮಾನ್ಯವಾಗಿ ಮನುಷ್ಯನದೇಹದಉಷ್ಣತೆಯು (37.2ಡಿಗ್ರಿ -97.5ಡಿಗ್ರಿ) ಆಗಿರುತ್ತದೆ.ಅತಿಯಾದಉಷ್ಣತೆಯಿಂದ ಸಾಧಾರಣದಿಂದತೀವ್ರಜ್ವರ,ಗಂಧೆಗಳು, ಊತಗಳು (ಕೈಕಾಲುಗಳು ಹಾಗೂ ಮೊಣಕಾಲು), ಉಷ್ಣತೆಯಿಂದ ಸೆಳೆತ (ಸ್ನಾಯುಗಳ ಸೆಳೆತ) ಪ್ರಜ್ಞೆತಪ್ಪುವುದು, ಉಷ್ಣತೆಯಿಂದ ಸುಸ್ತಾಗುವುದು ಹಾಗೂ ಉಷ್ಣತೆಯಿಂದ ಪಾಶ್ರ್ವವಾಯುಉಂಟಾಗ ಬಹುದು.ಅತೀಯಾದಉಷ್ಣತೆಯಿಂದಾಗಿ ಹೃದ್ರೋಗ ಸಮಸ್ಯೆಗಳು,ಉಸಿರಾಟದ ಸಮಸ್ಯೆಗಳು ಹಾಗೂ ಕಿಡ್ನಿ ಸಮಸ್ಯೆಗಳು ಅಧಿಕವಾಗುತ್ತವೆ.ತಲೆ ಸುತ್ತುವುದು,ಪ್ರಜ್ಞೆತಪ್ಪುವುದುವಾಕರಿಕೆಅಥವಾ ವಾಂತಿಯಾಗ ಬಹುದು.ತಲೆ ನೋವು,ಏರುಗತಿ ಉಸಿರಾಟ ಹಾಗೂ ಹೃದಯ ಬಡಿತ ಉಂಟಾಗಬಹುದು. ಇಂತಹ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದ್ದರೆ,ತಕ್ಷಣವೇತಂಪಾದ ಸ್ಥಳಕ್ಕೆ ತೆರಳಿ ಮತ್ತುದ್ರವಾಹಾರವನ್ನು ಸೇವಿಸಿ ನೀರಿನ ಸೇವನೆ ಅತ್ಯುತ್ತಮ.ತಕ್ಷಣವೇ ಸಹಾಯ ಹಾಗೂ ವೈದ್ಯಕೀಯ ನೆರವನ್ನು ಪಡೆಯಿರಿ.ಅರೆ ಪ್ರಜ್ಞಾವಸ್ಥೆ,ಪ್ರಜ್ಞೆತಪ್ಪುವುದು ಸಿಡಿಮಿಡಿ ಗೊಳ್ಳುವುದು ದ್ವಂದ್ವ,ಗಾಬರಿಗೊಳ್ಳವುದು ,ಅಥವಾಕೋಮಾ ಸ್ಥಿತಿ ತಲುಪಿದ್ದರೆ ತಕ್ಷಣವೇ 108,102 ಕ್ಕೆ ಸಂಪರ್ಕಿಸಿ.ಸಹಾಯಕ್ಕೆಕಾಯುತ್ತಿರುವಅವಧಿಯಲ್ಲಿ ವ್ಯಕ್ತಿಯನ್ನು ತಂಪಾದ ಪ್ರದೇಶಕ್ಕೆ ಸ್ಥಳಾಂತರ ಗೊಳಿಸಿ.ದೇಹದ ಭಾಗಗಳಿಗೆ ಹಾಗೂ ಬಟ್ಟೆ ಮೇಲೆ ತಣ್ಣಗಿನ ನೀರನ್ನು ಹಾಕುವುದು. ವ್ಯಕ್ತಿಯದೇಹದ ಮೇಲೆ ಹೆಚ್ಚು ಗಾಳಿಯನ್ನು ಬೀಸುವುದು ಮಾಡಬೇಕು ಎಂದು ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣಅಧಿಕಾರಿಗಳು ತಿಳಿಸಿದ್ದಾರೆ.