ಬೇಸಿಗೆ ಕ್ರಿಕೆಟ್ ಅಕ್ಯಾಡೆಮಿ ಮಾನ್ವಿ ಚೇತನ್ ಆಯ್ಕೆ

ಮಾನ್ವಿ,ಏ.೧೭- ಭಾರತೀಯ ಖ್ಯಾತ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ೬ ಕ್ರಿಕೆಟ್ ಅಕ್ಯಾಡೆಮಿ ಸಮ್ಮರ್ ಕ್ರಿಕೆಟ್ ಕೋಚಿಂಗ್‌ಗೆ ಮಾನ್ವಿಯ ನೇತಾಜಿ ಸ್ಕೂಲ್‌ನ ವಿದ್ಯಾರ್ಥಿ ಕುಮಾರ್ ಚೇತನ್ ಆಯ್ಕೆಯಾಗಿದ್ದಾನೆ.
ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ನೂರಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಟೆಸ್ಟ್‌ನಲ್ಲಿ ಭಾಗಿಯಾಗಿದ್ದರು. ಇದರಲ್ಲಿ ನಮ್ಮ ರಾಯಚೂರು ಇಲ್ಕೆಯಿಂದ ಚೇತನ್ ಮಾತ್ರ ಆಯ್ಕೆ ಆಗಿದ್ದಾನೆ.ಅಂಡರ್ ೧೪ ಮತ್ತು ಅಂಡರ್ ೧೬ ತಂಡದ ಆಯ್ಕೆಗಾಗಿ ಈ ತರಬೇತಿ ನಡೆಯುತ್ತದೆ.
ತರಬೇತಿ ಗೆ ಆಯ್ಕೆಯಾದ ಚೇತನ್ ಅವರಿಗೆ ಶುಭವಾಗಲಿ ಆತನ ಕ್ರೀಡಾ ಭವಿಷ್ಯ ಉಜ್ವಲವಾಗಲಿ ಎಂದು ಸಂಸ್ಥೆಯ ಕಾರ್ಯದರ್ಶಿ ಕೆ.ವಿಜಯಲಕ್ಷ್ಮಿ ಅಧ್ಯಕ್ಷ ಕೆ.ಈ.ನರಸಿಂಹ ಮತ್ತು ಶಿಕ್ಷಕರು ಅಭಿನಂದಿಸಿದ್ದಾರೆ.