ಬೇಸಿಗೆ ಕಾಲದಲ್ಲಿ ಗಿಡಗಳಿಗೆ ನೀರು ಹಾಕುವ ಅಭ್ಯಾಸ ಬೆಳೆಸಿಕೊಳ್ಳಿ: ವೀರೇಶ್

ಸಂಜೆವಾಣಿ ವಾರ್ತೆ
ಚಾಮರಾಜನಗರ ಮಾ.06- ಪ್ರತಿ ಒಬ್ಬರು ಜೀವನದ ಬದುಕನ್ನು ಗಿಡ ನೆಡುವುದರ ಮೂಲಕ ಸಾರ್ಥಕಗೊಳಿಸಿಕೊಳ್ಳಬೇಕು. ಸಮಾಜ ಸೇವಕ ಹಾಗೂ ಶಿಕ್ಷಕ ವೀರೇಶ್ ತಿಳಿಸಿದರು.
ನಗರದ ಪವನ್ ಸೇವಾ ಟ್ರಸ್ಟ್ ಮತ್ತು ಜೈಭುವನೇಶ್ವರಿ ಕನ್ನಡ ಯುವ ವೇದಿಕೆ, ಜಿಲ್ಲಾ ಚಿತ್ರಕಲಾವಿದರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಬೇಸಿಗೆ ಕಾಲದಲ್ಲಿ ಪರಿಸರ ಹಾಗೂಹಿರಿಯ ಸಮಾಜ ಸೇವಕರು ಮತ್ತು ಶಿಕ್ಷಕಹೆಚ್.ಎಸ್. ವೀರೇಶ್ವರ್ ರವರ 75 ನೇ ಜನ್ಮ ದಿನದ ಅಂಗವಾಗಿ ಸೋಮವಾರಪೇಟೆಯ ಎಂಸಿಎಸ್ ಶಾಲೆಯ ಆವರಣದಲ್ಲಿ ಏರ್ಪಡಿಸಿದ ಕಾರ್ಯಕ್ರಮಕ್ಕೆ ಗಿಡಕ್ಕೆ ನೀರನ್ನು ಹಾಕುವುದರ ಮೂಲಕ ಚಾಲೆನೆ ನೀಡಿ ನಂತರ ಮಾತನಾಡಿದ ಅವರು ಪರಿಸರ ಸಂರಕ್ಷಣೆ ನಮ್ಮಲ್ಲರ ಹೊಣೆ ಎಂದು ಕರೆ ನೀಡಿದರು.
ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆಅಧ್ಯಕ್ಷ ಜಿ. ಬಂಗಾರು ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಕಾಲೇಜು, ನಿಮ್ಮ ಮನೆ ಸುತ್ತಮುತ್ತ ಗಿಡ ನೆಡುವ ಹವ್ಯಾಸ ಬೆಳೆಸಿಕೊಳ್ಳುವ ಜೊತೆಗೆ ಗಿಡಗಳಿಗೆನೀರು ಹಾಕಬೇಕು. ಇದರ ಜೊತೆ ತಮ್ಮ ಮನೆ ಮೇಲೆ ಪಕ್ಷಿಗಳಿಗೆ ಅನುಕೂಲವಾಗಲು ಒಂದು ಪಾತ್ರೆಯಲ್ಲಿ ನೀರು ಇಡುವ ಅಭಿರುಚಿ ಬೆಳೆಸಿಕೊಳ್ಳಬೇಕು ಬೇಸಿಗೆ ಕಾಲದಲ್ಲಿ ಪಕ್ಷಿಗಳಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪವನ್ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ಎನ್. ಸಂಪತ್‍ಕುಮಾರ್, ರವಿತೇಜು, ಪ್ರಾಂಶುಪಾಲರಾದ ಶಶಿಧರ್‍ಮೂರ್ತಿ, ಮುಖ್ಯ ಶಿಕ್ಷಕ ಮಹದೇವಸ್ವಾಮಿ. ಎನ್. ಗೀತಾ, ನಂದಿನಿ, ನಯನಹಾಜರಿದ್ದರು