ಬೇಸಿಗೆ ಆರಂಭ : ಕುಡಿಯುವ ನೀರಿನ ಅರವಟಿಗೆಗೆ ಚಾಲನೆ

ಮಾನ್ವಿ,ಮಾ.೨೫- ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಮೆಕೊ ಕನ್ಸಟ್ರಕ್ಷನ್ಸ್ ಸಂಸ್ಥೆ ವತಿಯಿಂದ ಉದ್ಯಮ ಎಂ.ಈರಣ್ಣ ಬೇಸಿಗೆ ಅಂಗವಾಗಿ ಸಾರ್ವಜನಿಕರಿಗೆ ಉಚಿತವಾದ ತಂಪಾದ ಶುದ್ದ ಕುಡಿಯುವ ನೀರಿನ ಅರವಟಿಗೆಯನ್ನು ಪ್ರಾರಂಭಿಸಿದರು.
ನಂತರ ಮಾತನಾಡಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿರುವ ಮಾನ್ವಿ ಪಟ್ಟಣದಲ್ಲಿ ಬೇಸಿಗೆಯಲ್ಲಿ ಬಿಸಿಲು ತೀವ್ರವಾಗಿರುವುದರಿಂದ ಜನರಿಗೆ ತಂಪಾದ ನೀರು ಕುಡುವುದಕ್ಕೆ ಅಗತ್ಯವಾಗಿರುವುದರಿಂದ ಹಾಗೂ ತಾಲೂಕಿನ ಗ್ರಾಮೀಣ ಭಾಗದ ಜನರು ಕೂಡ ಪ್ರತಿನಿತ್ಯ ವಿವಿಧ ಕೆಲಸಗಳಿಗೆ ಪಟ್ಟಣಕ್ಕೆ ಬರುವುದರಿಂದ ಮತ್ತು ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ ಸಾವಿರಾರು ಜನ ಪ್ರಾಯಾಣಿಕರು ಪ್ರಾಯಾಣಿಸುವುದರಿಂದ ಅವರಿಗೂ ಕೂಡ ನೀರಿನ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಪ್ರತಿ ವರ್ಷದಂತೆ ಈ ವರ್ಷವು ಕೂಡ ಬೇಸಿಗೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಂಸ್ಥೆ ವತಿಯಿಂದ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಂಕರಯ್ಯಸ್ವಾಮಿ ಸುವರ್ಣಗಿರಿಮಠ, ಜಾಕೀರ್ ಮೈನುದ್ದೀನ್, ಅನೀಲಕುಮಾರ್, ಸೇರಿದಂತೆ ಅನೇಕ ಮುಖಂಡರು ಇದ್ದರು.