ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಮನವಿ

ದಾವಣಗೆರೆ. ಮಾ.೨೪; ಬೇಸಿಗೆ ಕಾಲ ಸಮೀಪಿಸುತ್ತಿದ್ದು, ಕೆರೆ ಕಟ್ಟೆಗಳು, ನೀರು ಸಂಗ್ರಹ ತೊಟ್ಟಿಗಳು ಖಾಲಿಯಾಗುತ್ತಿವೆ. ದಾವಣಗೆರೆ ಜಿಲ್ಲೆಯ ಪ್ರಮುಖ ಅರಣ್ಯ ಪ್ರದೇಶವಾಗಿರುವ ಕೊಂಡಜ್ಜಿ ಅರಣ್ಯ ಪ್ರದೇಶವು ಕೊಂಡಜ್ಜಿ ಕೆರೆಯನ್ನು ಅವಲಂಬಭಿತವಾಗಿದೆ,  ಅರಣ್ಯ ಪ್ರದೇಶದಲ್ಲಿ ಹಲವಾರು ಪ್ರಭೇದದ ಪ್ರಾಣಿಗಳು, ಪಕ್ಷಿಗಳು ಸ್ವಚ್ಚಂದ ಪರಿಸರದಲ್ಲಿ ಜೀವಿಸುತ್ತಿರುತ್ತವೆ, ಅರಣ್ಯದ ಬಹುಭಾಗ ಪ್ರಾಣಿ ಪಕ್ಷಿಗಳು ಕೆರೆಯ ನೀರನ್ನು ನಂಬಿಕೊಂಡು ಬದುಕುತ್ತಿವೆ, ಆದರೆ ಬೇಸಿಗೆ ಸಮೀಪಿಸುವಾಗ ಕೆರೆಗಳು ಬತ್ತಿಹೊಗುತ್ತವೆ. ಕಳೆದ ಭಾರಿಯೂ ಸಹ ಕೊಂಡಜ್ಜಿ ಕೆರೆ ಖಾಲಿಯಾದ ಪರಿಣಾಮ ಹಲವಾರು ಪ್ರಾಣಿ ಪಕ್ಷಿಗಳು ನೀರಿಲ್ಲದೆ ಸಾವನಪ್ಪಿದ್ದವು, ಈ ಭಾರಿ ಈ ರೀತಿಯ ಯಾವುದೇ ಅನಾಹುತ ಸಂಭವಿಸದಿರುವಂತೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಆದ್ದರಿಂದ ಬೇಸಿಗೆ ಅವಧಿ ಮುಗಿಯುವ ವರೆಗೆ ಕೊಂಡಜ್ಜಿ ಅರಣ್ಯದ ಆಯ್ದ ಸ್ಥಳಗಳಲ್ಲಿ ನೀರು ಶೇಕರಣಾ ತೊಟ್ಟಿಗಳನ್ನು ಅಳವಡಿಸಿ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಿದರೆ, ಅರಣ್ಯದ ಪ್ರಾಣಿ ಸಂಕುಲಕ್ಕೆ ಅನುಕೂಲವಾಗಲಿದೆ. ಸಾದ್ಯವಾದಷ್ಟು ಪ್ರಮಾಣದಲ್ಲಿ ಸಾರ್ವಜನಿಕರ, ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪ್ರಾಣಿ ಸಂಕುಲವನ್ನು ಉಳಿಸುವ ಕಾರ್ಯವನ್ನು ಕೈಗೊಳ್ಳಬೇಕೆಂದು ದಾವಣಗೆರೆ ವಲಯ ಅರಣ್ಯಾಧಿಕಾರಿಗಳಾದ ಸುರೇಶ್ ರವರಿಗೆ ಜನಸಾಮಾನ್ಯರ ಸೇವಾ ಸಂಸ್ಥೆ (ರಿ) ಅಧ್ಯಕ್ಷರಾದ ಪ್ರಸನ್ನ ಬೆಳಕೇರಿಯವರು ಮನವಿ ಸಲ್ಲಿಸಿದರು, ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.