ಬೇಸಿಗೆಯಲ್ಲಿ ನೀರು ಪೆÇೀಲಾಗುವದನ್ನು ತಪ್ಪಿಸಿ : ಜಿಲ್ಲಾಧಿಕಾರಿ


ಗದಗ,ಮಾ.25_ ಬೇಸಿಗೆ ಆರಂಭವಾಗಿದ್ದು ಗದಗ-ಬೆಟಗೇರಿ ಅವಳಿ ನಗರಗಳ ಪ್ರತಿ ವಾರ್ಡಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಬೇಕು. ಕೆಲವೊಂದು ವಾರ್ಡ್‍ಗಳಲ್ಲಿ ನೀರು ಪೋಲಾಗುತ್ತಿರುವುದನ್ನು ಗಮನಿಸಿ ಅಗತ್ಯವಿರುಷ್ಟು ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅಧಿಕಾರಿಗಳಿಗೆ ಸೂಚಿಸಿದರು.
ಗದಗ-ಬೆಟಗೇರಿ ನಗರಸಭೆ ಸಭಾಂಗಣದಲ್ಲಿ ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅವಳಿ ನಗರಕ್ಕೆ ಜಲಮೂಗಳಿಂದ ಅಗತ್ಯವಿರುವಷ್ಟು ನೀರು ಸರಬರಾಜು ಆಗುತ್ತಿದ್ದು, ನೀರು ಪೆÇೀಲಾಗುವದನ್ನು ತಪ್ಪಿಸಿ ಸರದಿಯನುಸಾರ ಎಲ್ಲ ವಾರ್ಡಗಳಿಗೂ ಸಮರ್ಪಕ ನೀರು ಒದಗಿಸುವಂತೆ ನೋಡಿಕೊಳ್ಳಬೇಕು. ನಗರ ಸಭೆಯ ಅಧಿಕಾರಿ ಸಿಬ್ಬಂದಿಗಳು ನೀರು ಸರಬರಾಜು ಮಾಡುವ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸಬಾರದು. ನೀರು ಪೂರೈಕೆಗೆ ಸಂಬಂಧಿಸಿದ ಸಿಬ್ಬಂದಿಗಳ ವಿವರ, ದೂರವಾಣಿ ಸಂಖ್ಯೆ ಹಾಗೂ ನೀರು ಪೂರೈಕೆಗೆ ನಿಗದಿಪಡಿಸಿದ ಅವಧಿಯನ್ನು ತಯಾರಿಸಿ ಅದಕ್ಕೆ ಅನುಗುಣವಾಗಿ ಅನುಷ್ಠಾನಗೊಳ್ಳುತ್ತಿರುವ ಬಗ್ಗೆ ಹಿರಿಯ ಅಧಿಕಾರಿಗಳು ಗಮನಹರಿಸಿ ಅವಶ್ಯಕವಿದ್ದಲ್ಲಿ ಪತ್ರಿಕೆಗಳ ಮೂಲಕ ಸಾರ್ವಜನಿಕರ ಗಮನಕ್ಕೆ ತರಲು ಸೂಚನೆ ನೀಡಿದರು. ನೀರು ಸರಬರಾಜು ಆಗುವ ಸಂದರ್ಭದಲ್ಲಿ ಪೈಪಲೈನಗಳಲ್ಲಿ ಸೋರಿಕೆ ಕಂಡು ಬಂದಲ್ಲಿ ಕೂಡಲೇ ದುರಸ್ತಿಗೊಳಿಸಲು ಅಗತ್ಯದ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳುವಂತೆ ತಿಳಿಸಿದರು.
ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿ ಅಮೃತ ಯೋಜನೆಯಡಿ ನಗರ ಸಾರಿಗೆ ಘಟಕದಡಿ ಮುಳಗುಂದ ನಾಕಾ ವೃತ್ತ, ಬನ್ನಿ ಮಹಾಕಾಳಿ ವೃತ್ತ, ಕಾರ್ಯಪ್ಪ ವೃತ್ತ ಹಾಗೂ ಭೂಮರಡ್ಡಿ ವೃತ್ತಗಳನ್ನು ಅಭಿವೃದ್ಧಿ ಪಡಿಸಲು ಕೂಡಲೇ ಕ್ರಮವಹಿಸಬೇಕು. ಎಸ್.ಎಂ.ಕೃಷ್ಣ ನಗರ, ಹಾಕಿ ಸ್ಟೇಡಿಯಂ, ಗಾಂಧೀ ವೃತ್ತ, ಬನ್ನಿಕಟ್ಟಿ ವೃತ್ತ, ಗಂಗಿಮಡಿ, ಜಿಲ್ಲಾಡಳಿತ ಭವನ, ಜಲಮಂಡಳಿ ಕಚೇರಿ ಹತ್ತಿರ ಮುಳಗುಂದ ರಸ್ತೆ, ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾದ ಬಸ ತಂಗುದಾಣಗಳನ್ನು ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ನಿರ್ವಹಿಸಿ ಸಾರ್ವಜನಿಕ ಉಪಯೋಗಕ್ಕೆ ನೀಡಲು ಅಗತ್ಯದ ಕ್ರಮವಹಿಸಲು ಸೂಚಿಸಿದರು.
ಯು.ಜಿ.ಡಿ. ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು ಪೂರ್ಣಗೊಂಡ ಜೋನಗಳಲ್ಲಿ ಸಾರ್ವಜನಿಕರಿಗೆ ಮನೆ ಮನೆಗೆ ಸಂಪರ್ಕ ಪಡೆಯಲು ಜಾಗೃತಿ ಮೂಡಿಸಬೇಕು. ಕೆ.ಯು.ಡಬ್ಲೂ.ಎಸ್. ಹಾಗೂ ನಗರಸಭೆ ನೈರ್ಮಲ್ಯ ಸಿಬ್ಬಂದಿಗಳು ಪ್ರತಿದಿನ ವಾರ್ಡುಗಳಲ್ಲಿ ಸಾರ್ವಜನಿಕರಿಗೆ ತಿಳಿಸಿ ಯೋಜನೆಯ ಸದುಪಯೋಗ ಪಡೆಯಲು ಸೂಚಿಸಿದರು. ವಿವಿಧ ಇಲಾಖೆಗಳಿಂದ ಗದಗ ಆಂತರಿಕ ಹಾಗೂ ಬಾಹ್ಯ ರಸ್ತೆಗಳ ಅಭಿವೃದ್ಧಿಯನ್ನು ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ನಿರ್ದೇಶನ ನೀಡಿದರು.
ಸ್ಥಳೀಯ ಸಂಸ್ಥೆಗಳ ಆರ್ಥಿಕ ಸಬಲೀಕರಣಕ್ಕಾಗಿ ಆಸ್ತಿ ತೆರಿಗೆ, ನೀರಿನ ಕರ, ವಾಣಿಜ್ಯ ತೆರಿಗೆ, ಮಳಿಗಗಳಿಂದ ಆದಾಯವನ್ನು ಕ್ರೋಡಿಕರಿಸಿಕೊಂಡು ಸ್ಥಳೀಯ ಸಂಸ್ಥೆಗಳ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸೂಚಿಸಿದರು. ಈಗಾಗಲೇ ಕೋವಿಡ್-19 ಸಾಂಕ್ರಾಮಿಕ ರೋಗ ಎರಡನೇ ಅಲೇ ಹರಡುತ್ತಿರುವ ಹಿನ್ನಲೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಯ ಹಾಗೂ ಸಾರ್ವಜನಿಕರಿಗೆ ಸೌಲಭ್ಯ ನೀಡುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ಕೋವಿಡ್-19 ಸಾಂಕ್ರಾಮಿಕ ರೋಗದ ಸುರಕ್ಷತೆಗೆ ಅಗತ್ಯದ ಸುರಕ್ಷಾ ಸಾಮಗ್ರಿಗಳನ್ನು ನಿಯಮಿತವಾಗಿ ಒದಗಿಸುವಂತೆ ತಿಳಿಸಿದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶ ಪ್ರಭಾರ ಯೋಜನಾ ನಿರ್ದೇಶಕ ಅನೀಲಕುಮಾರ ಮುದ್ದಾ, ಹಾಗೂ ಪೌರಾಯುಕ್ತ ರಮೇಶ ಜಾದವ ಮಾತನಾಡಿ ಜಿಲ್ಲಾಧಿಕಾರಿಗಳು ಸೂಚಿಸಿದಂತೆ ನಗರ ಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನೀರು ನಿರ್ವಹಣೆ ಬಗ್ಗೆ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕಾರ್ಯಪ್ರವೃತ್ತರಾಗೊಣವೆಂದು ನುಡಿದರು.
ಸಭೆಯಲ್ಲಿ ಯೋಜನೆ ನಿರ್ದೇಶಕರ ಕಾರ್ಯಾಲಯದ ಅಭಿಯಂತರರು, ಕೆ.ಯು.ಆಯ್.ಡಿ.ಎಫ್.ಸಿ., ಹಾಗೂ ಕೆ.ಯು.ಡಬ್ಲೂ.ಎಸ್. ಅಧಿಕಾರಿಗಳು, ನಗರ ಸಭೆ ಅಧಿಕಾರಿ ಸಿಬ್ಬಂದಿಗಳು ಸಭೆಯಲ್ಲಿ ಹಾಜರಿದ್ದರು.